ಕತ್ತು ಕೊಯ್ದುಕೊಂಡು ಆತ್ಮಹತ್ಯೆ

INDI RENUKA MURDER CASE
ಇಂಡಿಯಲ್ಲಿ ರೇಣುಕಾ ಕನ್ನೊಳ್ಳಿ ಕೊಲೆಗೆ ಬಳಸಿದ ಮಾರಕಾಸ್ತ್ರ
Published on

ಎಚ್.ಡಿ.ಕೋಟೆ: ತಾಲೂಕಿನ ಭೋಗೇಶ್ವರ ಕಾಲನಿ ಗ್ರಾಮದ ಶುಂಠಿ ಜಮೀನಿನಲ್ಲಿ ಶನಿವಾರ ಕತ್ತು ಕುಯ್ದುಕೊಂಡು ಕೇರಳ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೇರಳ ರಾಜ್ಯದ ಗೂಡ್ಲೂರು ತಾಲೂಕಿನ ಮಡುವನ್ ತೆರವಂಬ ಗ್ರಾಮದ ಆರ್.ಮುಕುಂದನ್(38) ಮೃತ ವ್ಯಕ್ತಿ.

ಭೋಗೇಶ್ವರ ಕಾಲನಿ ಗ್ರಾಮದಲ್ಲಿ ಆರ್.ಮುಕುಂದನ್ ಎಳೆಂಟು ವರ್ಷದಿಂದ ಜಮೀನು ಗುತ್ತಿಗೆ ಪಡೆದು ಶುಂಠಿ ಬೆಳೆ ಬೆಳೆದು ಜಮೀನಿನಲ್ಲಿ ವಾಸ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ಕೇರಳದಲ್ಲಿ ಇರುವ ತನ್ನ ತಾಯಿಗೆ ಪೋನ್ ಮಾಡಿ ನಾನು ಇಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಣ್ಣನನ್ನು ಕಳಿಸಿ ನಾನು ವಾಪಸ್ ಊರಿಗೆ ಬರುತ್ತೇನೆ ಎಂದು ಹೇಳಿದ್ದಾರೆ. ಆತನ ತಾಯಿ ನಾಳೆ ಅಣ್ಣನನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ.

ಶನಿವಾರ ಕೇರಳ ಮೂಲದ ರವಿ ಮತ್ತು ಬಾಬು ಜತೆಗೆ ಶುಂಠಿ ಜಮೀನಿನಲ್ಲಿ ಕೆಲಸ ಮಾಡಿ ಆರ್.ಮುಕುಂದನ್ ಶೆಡ್‌ಗೆ ಒಬ್ಬರೇ ಬಂದಿದ್ದಾನೆ. ನಂತರ 12 ಗಂಟೆ ಸಮಯದಲ್ಲಿ ಶೆಡ್‌ನಿಂದ ವ್ಯಕ್ತಿ ಕಿರುಚಿಕೊಂಡ ಶಬ್ದ ಕೇಳಿ ಬಂದಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರವಿ ಮತ್ತು ಬಾಬು ಬಂದು ನೋಡಿದಾಗ ಹರಿತವಾದ ಚಾಕುವಿನಿಂದ ವ್ಯಕ್ತಿ ಕತ್ತು ಕುಯ್ದುಕೊಂಡು ನರಳಾಡುತ್ತಿದ್ದನ್ನು ನೋಡಿದ್ದಾರೆ. ತಕ್ಷಣ ಮೃತ ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿ ವಿಚಾರ ತಿಳಿಸಿ, ಗ್ರಾಮಸ್ಥರ ಸಹಕಾರದಲ್ಲಿ ಜೀಪ್‌ನಲ್ಲಿ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮುಕುಂದನ್ ಮೃತಪಟ್ಟಿದ್ದಾರೆೆ.

ಆಸ್ಪತ್ರೆಗೆ ಬಂದ ಮೃತರ ಸಹೋದರ ಮಣಿಕಂಠ, ನನ್ನ ತಮ್ಮ ಆರ್.ಮುಕುಂದನ್ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ. ಹಾಗಾಗಿ ಆತನೆ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಎಚ್.ಡಿ.ಕೋಟೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಚಿಕ್ಕನಾಯಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net