ನೇಣುಬಿಗಿದು ಆತ್ಮಹತ್ಯೆ

Hanging
Published on

ಕುಂದಾಪುರ: ಕುಂಭಾಶಿ ಜನತಾ ಕಾಲನಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ತೆಕ್ಕಟ್ಟೆ ಗ್ರಾಮದ ಕೃಷ್ಣ ಎಂಬುವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು ಒಂದೂವರೆ ವರ್ಷದಿಂದ ಕುಂಭಾಶಿ ಜನತಾ ಕಾಲನಿಯಲ್ಲಿ ಪತ್ನಿ ಮತ್ತು ಪುತ್ರಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಕೃಷ್ಣ ಅವರು ಬೈಕ್ ಅಪಘಾತದಲ್ಲಿ ಬಲಗಾಲಿನ ಮೂಳೆ ಮುರಿದು ಗಾಯವಾಗಿ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದರು. ಗುರುವಾರ ಬೆಳಗ್ಗೆ ಅವರ ಪತ್ನಿ ಸುಶೀಲಾ ಮಗಳನ್ನು ಶಾಲೆಗೆ ಬಿಡಲು ಹೋಗಿ ವಾಪಸ್ ಮನೆಗೆ ಬಂದಾಗ ಕೃಷ್ಣ ಅವರು ಮನೆಯ ಕೋಣೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net