

ಕಾರ್ಕಳ: ಮನೆಯಲ್ಲಿಯೇ ಆನ್‌ಲೈನ್ ಟ್ರೇಡಿಂಗ್ ಕೆಲಸ ಮಾಡಿಕೊಂಡಿದ್ದ ಕುಕ್ಕುಂದೂರು ಗ್ರಾಮದ ವಿಜೇಂದ್ರ (33) ಆರ್ಥಿಕ ಸಮಸ್ಯೆಯಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಮನೆಯಲ್ಲಿಯೇ ಆನ್‌ಲೈನ್ ಟ್ರೇಡಿಂಗ್ ಕೆಲಸ ಮಾಡಿಕೊಂಡಿದ್ದು, ಆರ್ಥಿಕ ಸಮಸ್ಯೆಯಿಂದ ಮನನೊಂದು ಬುಧವಾರ ಮನೆಯ ನಡುಕೋಣೆಯಲ್ಲಿ ಪಕ್ಕಾಸಿಗೆ ಸೀರೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.