

ಹಿರೇಬಾಗೇವಾಡಿ: ಇಲ್ಲಿಯ ಕೆರೆ ಓಣಿಯ ನಿವಾಸಿ ಮಾಜಿ ಯೋಧ ಬಸಲಿಂಗಪ್ಪ (ಉಳವಪ್ಪ) ಗಂಗಪ್ಪ ಶಿಂತ್ರಿ (43) ಶನಿವಾರ ತಡರಾತ್ರಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಮೀಪದ ಬೆಂಡಿಗೇರಿ ಗ್ರಾಮದ ಹದ್ದಿಯಲ್ಲಿನ ಕಲ್ಲಪ್ಪ ಶಿಂತ್ರಿ ಎಂಬುವರ ಹೊಲದಲ್ಲಿ ಸಾರಾಯಿ ಕುಡಿದ ನಶೆಯಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಾನುವಾರ ಬೆಳಗಿನ ಜಾವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನ್ನ ಗಂಡನ ಸಾವಿನಲ್ಲಿ ಸಂಶಯವಿರುವುದಾಗಿ ಮೃತನ ಪತ್ನಿ ಮೀನಾ ಶಿಂತ್ರಿ ದೂರು ನೀಡಿದ್ದಾಳೆ.