ಪ್ರೀತಿಯಿಂದ ಹಿಂದೆ ಸರಿದ ದ್ವೇಷದಿಂದ ಇರಿತ ಪ್ರಕರಣ : ಮನನೊಂದ ಯುವತಿ ಆತ್ಮಹತ್ಯೆ ಯತ್ನ

New Project (17)
Published on

 ಕಾಸರಗೋಡು: ಸ್ನೇಹ ಮುಂದುವರಿಸಲು ಹಿಂದೇಟು ಹಾಕಿದ ದ್ವೇಷದಿಂದ ಪ್ರಿಯತಮ ಇರಿದು ಗಾಯಗೊಳಿಸಿದ್ದ ಯುವತಿ, ಮಾನಸಿಕವಾಗಿ ನೊಂದು ಕಣ್ಣೂರು ಎಡಕ್ಕಾಡ್ ಕಾಟುಚ್ಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಾಸರಗೋಡು ಜಿಲ್ಲೆ ನೀಲೇಶ್ವರ ಸನಿಹದ ತೈಕಡಪ್ಪುರ ನಿವಾಸಿ, ಪ್ರಸಕ್ತ ಎಡಕ್ಕಾಡು ಕಾಟುಚ್ಚೇರಿಯಲ್ಲಿ ವಾಸಿಸುತ್ತಿರುವ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ನಗರ ಠಾಣೆ ವ್ಯಾಪ್ತಿಯ ಕಕ್ಕಾಡ್ ನಿವಾಸಿ ವಿನೀತ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಪರಿಚಯಗೊಂಡಿದ್ದ ಯುವತಿಯೊಂದಿಗೆ ವಿನೀತ್ ಸಲುಗೆಯಿಂದ ವರ್ತಿಸುತ್ತಿದ್ದು, ನಂತರ ಯುವತಿ ಈತನ ಸಂಪರ್ಕಕ್ಕೆ ಸಿಗದೆ ದೂರಾಗಿದ್ದಳು. ಈ ದ್ವೇಷದಿಂದ ವಿನೀತ್ ಚಾಕುವಿನೊಂದಿಗೆ ಆಕೆಯ ಮನೆಗೆ ನುಗ್ಗಿ ಇರಿಯಲು ಮುಂದಾಗುತ್ತಿದ್ದಂತೆ ಯುವತಿ ತಡೆದಿದ್ದಳು. ಇದರಿಂದ ಚಾಕು ಹಣೆಗೆ ತಾಗಿ ಗಾಯಗಳುಂಟಾಗಿತ್ತು. ಮನೆಯೊಳಗಿನ ಪೀಠೋಪಕರಣವನ್ನೂ ವಿನೀತ್ ಹಾನಿಗೈದಿದ್ದ. ಈತನ ಕಿರುಕುಳದಿಂದ ಮನನೊಂದ ಯುವತಿ ಇಲಿಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net