

ಅರಕಲಗೂಡು: ಸಾಲಬಾಧೆ ತಾಳಲಾರದ ರೈತ ತಾಲೂಕಿನ ಮತ್ತರ ಗ್ರಾಮದಲ್ಲಿ ಶನಿವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚನ್ನೇಗೌಡ (63) ಮೃತ ರೈತ. ಈತ ಬೆಳೆಗಾಗಿ ಮಲ್ಲಿಪಟ್ಟಣ ಕೆನರಾ ಬ್ಯಾಂಕ್‌ನಲ್ಲಿ ಒಂದು ಲಕ್ಷ ರೂ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಕೈ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಸಾಧ್ಯವಾಗದ ಕಾರಣ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಸೌಮ್ಯಾ, ಕೃಷಿ ಸಹಾಯಕ ನಿರ್ದೇಶಕಿ ಕವಿತಾ, ಉಪ ತಹಸೀಲ್ದಾರ್ ಹರೀಶ್, ರಾಜಸ್ವ ನಿರೀಕ್ಷಕ ವಸಂತ್ ಭೇಟಿ ನೀಡಿ ಪರಿಶೀಲಿಸಿದರು.