

ಗುಂಡ್ಲುಪೇಟೆ : ಹೊಟ್ಟೆನೋವು ತಾಳಲಾರದೆ ವ್ಯಕ್ತಿಯೊಬ್ಬ ಕ್ರಿಮಿನಾಶಕ ಮಿಶ್ರಿತ ಮದ್ಯ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬನ್ನಿತಾಳಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ಮಹದೇವಶೆಟ್ಟಿ (45) ಬಿನ್ ಚಿಕ್ಕರಂಗಶೆಟ್ಟಿ ಮೃತ. ಇವರಿಗೆ ಆಗಾಗ್ಗೆ ಹೊಟ್ಟೆನೋವು ಬರುತ್ತಿತ್ತು. ಕಳೆದ ಕೆಲವು ದಿನಗಳಿಂದ ಹೊಟ್ಟೆನೋವು ತೀವ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮದ್ಯಕ್ಕೆ ಕ್ರಿಮಿನಾಶಕ ಬೆರೆಸಿ ಕುಡಿದ ಪರಿಣಾಮ ಸಾವಿಗೀಡಾಗಿದ್ದಾರೆ.
ಈ ಬಗ್ಗೆ ಮೃತನ ಸಹೋದರ ಬಸವಶೆಟ್ಟಿ ಎಂಬುವರ ದೂರು ಸ್ವೀಕರಿಸಿದ ಪಟ್ಟಣದ ಪೊಲೀಸರು, ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರ ವಶಕ್ಕೆ ನೀಡಿದರು.