ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

1706801-suicide-by-hanging
Published on

ಉಳ್ಳಾಲ: ತಲಪಾಡಿ ನಾರ್ಲ ನಿವಾಸಿ ಪುಷ್ಪಲತಾ ಎಂಬುವರ ಪುತ್ರಿ, ದ್ವಿತೀಯ ಬಿಎ ವಿದ್ಯಾರ್ಥಿನಿ ಶ್ರೇಯಾ(19) ಎಂಬುವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪುಷ್ಪಲತಾ ಅವರು ತಲಪಾಡಿ ಸಮೀಪದ ಖಾಸಗಿ ಸಂಸ್ಥೆಯಲ್ಲಿ ಅಟೆಂಡರ್ ಆಗಿದ್ದು, ಸಂಸ್ಥೆಯ ವಸತಿಗೃಹದಲ್ಲೇ ಪತಿ ಮತ್ತು ಮಕ್ಕಳ ಜತೆ ವಾಸವಿದ್ದರು. ಶ್ರೇಯಾ ಸೋಮವಾರ ಬೆಳಗ್ಗೆ ಕಾಲೇಜಿಗೆ ತೆರಳಿದ್ದಳು. ಸಂಜೆ ಆಕೆಯ ತಂಗಿ ಶಾಲೆಯಿಂದ ಬಂದಾಗ ಮನೆಯ ಬಾಗಿಲು ತೆರೆದಿತ್ತು. ಒಳಗೆ ಹೋಗಿ ನೋಡಿದಾಗ ಶ್ರೇಯಾ ಬೆಡ್‌ರೂಂನ ಕಿಟಕಿಗೆ ಶಾಲಿನಲ್ಲಿ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಸ್ಥಳದಲ್ಲಿ ಪೊಲೀಸರಿಗೆ ಡೆತ್‌ನೋಟ್ ಸಿಕ್ಕಿದೆ. ಓದಿನಲ್ಲಿ ಕಳೆದ ಎರಡು ತಿಂಗಳಿನಿಂದ ವಿಪರೀತ ಒತ್ತಡ ಎದುರಿಸುತ್ತಿದ್ದು, ಇದೇ ಕಾರಣದಿಂದ ತಲೆನೋವಿನಿಂದ ಬಳಲುತ್ತಿದ್ದುದಾಗಿ ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net