ನೇಣು ಬಿಗಿದುಕೊಂಡು ಸೂಯಿಸೈಡ್

suicide hang
Published on

ಕಾಸರಗೋಡು: ವರ್ಕಾಡಿ ಕೋಳ್ಯೂರು ಕೊಡಂಗೆ ನಿವಾಸಿ ಸಂಜೀವ ಮೂಲ್ಯ(64) ಎಂಬುವರು ಮನೆ ಸಮೀಪದ ಹಟ್ಟಿಯ ಮಹಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಹಾಗೂ ಮಕ್ಕಳು ಹೊರಗೆ ತೆರಳಿದ್ದು, ಸಂಜೆ ವಾಪಸಾದಾಗ ಸಂಜೀವ ಮೂಲ್ಯ ನಾಪತ್ತೆಯಾಗಿದ್ದರು. ಹುಡುಕಾಟದ ಮಧ್ಯೆ ಮೃತದೇಹ ಪತ್ತೆಯಾಗಿದೆ. ಬಡಗಿ ವೃತ್ತಿ ನಡೆಸುತ್ತಿದ್ದರು. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net