

ಉಡುಪಿ: ಮನುಷ್ಯನ ಆನಂದಕ್ಕೆ ಹಣವೇ ಮುಖ್ಯವಲ್ಲ. ಪ್ರವಾಸಗಳ ಮೂಲಕವೂ ನೆಮ್ಮದಿ ಕಂಡುಕೊಳ್ಳಬಹುದು. ಸಂಶೋಧನಾ ಮನೋಭಾವವಿದ್ದರೆ ಪ್ರವಾಸ ಕಥನದ ಜೊತೆಗೆ ಅಧ್ಯಯನ ಮಾಡಲು ಸಾಧ್ಯ ಎಂದು ನಿವೃತ್ತ ಉಪನ್ಯಾಸಕ ಶ್ರೀಕಾಂತ್ ರಾವ್ ಸಿದ್ದಾಪುರ ಹೇಳಿದರು.
ಶನಿವಾರ ಸುಹಾಸಂ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ದಿನೇಶ್ ಉಪ್ಪೂರು ಅವರ ಪ್ರವಾಸ ಕಥನಗಳು ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮನುಷ್ಯರ ಮಧ್ಯೆ ಮಾತುಕತೆ ಕಡಿಮೆಯಾಗುತ್ತದಿದು, ಟಿವಿ, ಮೊಬೈಲ್ ಗಳಲ್ಲಿ ಮುಳುಗಿರುತ್ತಾರೆ. ಮನಸ್ಸು ಅರಳಲು ಮುಕ್ತ ಮಾತುಕತೆ ಅತೀ ಅಗತ್ಯ. ಬರವಣಿಗೆಯ ಮೂಲಕವೂ ಆನಂದ ಪಡೆಯಬಹುದು. ಯುವ ಪೀಳಿಗೆ ಓದು, ಬರಹ, ಸಂಗೀತ ಮುಂತಾದ ಕಲಾಪ್ರಾಕಾರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸುಹಾಸಂ ಅಧ್ಯಕ್ಷ ಶಾಂತರಾಜ್ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸುಹಾಸಂ ಕಾರ್ಯದರ್ಶಿ ಗೋಪಾಲ ಭಟ್, ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್, ಲೇಖಕ ದಿನೇಶ್ ಉಪ್ಪೂರು ಉಪಸ್ಥಿತರಿದ್ದರು. ಸಂಧ್ಯಾ ಶೆಣೈ ನಿರೂಪಿಸಿದರು.