ಜಗಕ್ಕೆ ಶ್ರೀ ಕೃಷ್ಣನ ಸಂದೇಶ ಸಾರಿದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು

sugunendra theertha swamiji
Published on

ಮೈಸೂರು: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ವಿಶ್ವಪರ್ಯಟನೆಯ ಮೂಲಕ ಜಗದಗಲ ಕೃಷ್ಣನ ಸಂದೇಶವನ್ನು ಸಾರಿದ್ದಾರೆ ಎಂದು ಎಂದು ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಹೇಳಿದರು.

ಶ್ರೀ ಕೃಷ್ಣ ಮಂಡಳಿ ಮತ್ತು ಶ್ರೀ ಕೃಷ್ಣ ಟ್ರಸ್ಟ್ ವತಿಯಿಂದ ಸರಸ್ವತಿಪುರಂನ ಶ್ರೀ ಕೃಷ್ಣಧಾಮದಲ್ಲಿ ಗುರುವಾರ ಷಷ್ಠೃಬ್ದ ಪೂರ್ತಿ ನಿಮಿತ್ತ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಹಮ್ಮಿಕೊಂಡ ಅಭಿವಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಡೀ ವಿಶ್ವವೇ ಭಗವಂತನ ಸೃಷ್ಟಿ. ಈ ತಾತ್ವಿಕತೆಯನ್ನು ಅರ್ಥ ಮಾಡಿಕೊಂಡ ಶ್ರೀಪಾದರು ಹಲವಾರು ದೇಶಗಳಲ್ಲಿ ಸಂಚರಿಸಿ ಕೃಷ್ಣನ ಸಂದೇಶ ವನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಭಗವದ್ಗೀತೆಯನ್ನು ಶ್ರೀಪಾದರು ಆಂಗ್ಲಭಾಷೆ ಮೂಲಕ ವಿದೇಶಿಯರಿಗೆ ತಿಳಿಸುವ ಮೂಲಕ ಸನಾತನ ಧರ್ಮದ ಪ್ರಯೋಜ, ತಿರುಳನ್ನು ಅರ್ಥ ಮಾಡಿಸಿದ್ದಾರೆ. ಅನೇಕ ಧಾರ್ಮಿಕ ಕೇಂದ್ರಗಳನ್ನು ತೆರೆದಿದ್ದಾರೆ. ಹಲವಾರು ಪ್ರಾಚೀನ ದೇಗುಲಗಳನ್ನು ಜೀರ್ಣೋ ದ್ಧಾರ ಮಾಡಿದ್ದಾರೆ. ಅಮೆರಿಕದಲ್ಲಿ ಒಂದು ಸಾವಿರ ಮಕ್ಕಳಿಗೆ ಗೀತ ಕಂಠಪಾಠ ಮಾಡಿಸಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಹಲವಾರು ಕಡೆಗಳಲ್ಲಿ ಕೃಷ್ಣ ಮಂದಿರ ಸ್ಥಾಪಿಸಿದ್ದಾರೆ. ಇದು ಭಾರತೀಯರಿಗೆ ರೋಮಾಂಚನ ಉಂಟು ಮಾಡುವ ವಿಷಯ ಎಂದು ಹೇಳಿದರು.

ವೇದಿಕೆಯಲ್ಲಿ ಮೇಯರ್ ಸುನಂದಾ ಪಾಲನೇತ್ರ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ವಿದ್ವಾನ್ ಬಿ. ಗೋಪಾಲಾಚಾರ್ಯ, ಶ್ರೀ ಕೃಷ್ಣಮಿತ್ರ ಮಂಡಳಿ ಅಧ್ಯಕ್ಷ ಆರ್. ಸುಬ್ರಹ್ಮಣ್ಯ ತಂತ್ರಿ, ಶ್ರೀ ಕೃಷ್ಣ ಟ್ರಸ್ಟ್ ಅಧ್ಯಕ್ಷ ಮೋಹನ್, ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net