

ಪಡುಬಿದ್ರಿ: ಕಾಪುವಿನ ಶ್ರೀ ಹಳೇ, ಹೊಸ ಮತ್ತು ಮೂರನೇ ಮಾರಿಗುಡಿಯಲ್ಲಿ ಎರಡು ದಿನಗಳ ಕಾಲ ಜರುಗಿದ ಸುಗ್ಗಿ ಮಾರಿಪೂಜೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಂಡು ದೇವಿಗೆ ವಿವಿಧ ಸೇವೆಗಳನ್ನು ಸಮರ್ಪಿಸಿದರು.
ಗದ್ದುಗೆಯೇ ಪ್ರಧಾನವಾಗಿರುವ ಕಾಪು ಮಾರಿಯಮ್ಮನ ಸನ್ನಿಧಿಯಲ್ಲಿ ಗದ್ದಿಗೆ ಪೂಜೆ, ಹೂವಿನ ಪೂಜೆ, ಕುಂಕುಮಾರ್ಚನೆ ಸಹಿತ ವಿವಿಧ ಸೇವೆ ಹಾಗೂ ಹರಕೆಗಳನ್ನು ಸಮರ್ಪಿಸಲಾಯಿತು. ಕಳೆದೆರಡು ವರ್ಷಗಳಿಂದ ಕರೊನಾ ಪರಿಣಾಮ ಮೂರೂ ಮಾರಿಗುಡಿಗಳಲ್ಲಿ ಸುಗ್ಗಿ, ಆಟಿ ಹಾಗೂ ಜಾರ್ದೆ ಮಾರಿಪೂಜೆಗಳು ಭಕ್ತರಿಗೆ ಪ್ರವೇಶವಿಲ್ಲದೆ ನಡೆದಿತ್ತು. ಈ ಬಾರಿ ವಿವಿಧೆಡೆಯಿಂದ ಆಗಮಿಸಿದ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದು ಬಾಕಿಯಿದ್ದ ಹರಕೆ ತೀರಿಸಿದರು.