

ಮೈಸೂರು: ಜಾತಿ ಗಣತಿಯಲ್ಲಿ ಆಗುತ್ತಿರುವ ಗೊಂದಲ ಪರಿಹರಿಸಲು ಆಧಾರ್ ಕಾರ್ಡ್‌ನಲ್ಲಿ ಜಾತಿ ನಮೂದಿಸುವುದು ಉತ್ತಮ ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಹೇಳಿದರು.
ನಮ್ಮದು ಜಾತ್ಯಾತೀತ ರಾಷ್ಟ್ರವೆಂದು ಹೇಳಲಾಗುತ್ತಿದ್ದರೂ, ಜಾತಿ ವ್ಯವಸ್ಥೆ ಬೇರೂರಿದೆ. ಇದುವರೆಗೆ ನಡೆಸಿದ ಜನ ಜನಗಣತಿಯಲ್ಲಿ ಯಾವ ಜಾತಿಯವರು ಎಷ್ಟು ಸಂಖ್ಯೆಯಲ್ಲಿ ಇದ್ದಾರೆ ಎಂಬ ಮಾಹಿತಿ ನಿಖರವಾಗಿ ದೊರೆತ್ತಿಲ್ಲ. ಹಾಗಾಗಿ ಈ ಹಿಂದೆ 2011ರಲ್ಲಿ ನಡೆಸಲಾದ ಜಾತಿ ಜನಗಣತಿಯ ವರದಿಯನ್ನು ಯಾವುದೇ ರಾಜಕೀಯ ಪಕ್ಷಗಳು ಒಪ್ಪದ ಕಾರಣದಿಂದ ಆ ಗಣತಿಯನ್ನು ಪರಿಗಣಿಸಲಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯ ಸರ್ಕಾರ ನೂರಾರು ಕೋಟಿ ರೂ. ಖರ್ಚು ಮಾಡಿ ಕಾಂತರಾಜು ಆಯೋಗದ ವರದಿ, ಜಯಪ್ರಕಾಶ್ ಹೆಗಡೆ ಆಯೋಗದಿಂದ ವರದಿ ಪಡೆದುಕೊಂಡಿದೆ. ಆದರೆ, ಜಾತಿ ಜನಗಣತಿಯ ಅಂಕಿ ಅಂಶಗಳನ್ನು ಯಾರು ಒಪ್ಪುತ್ತಿಲ್ಲ. ಹೀಗಾಗಿ ಆಧಾರ್‌ನಲ್ಲಿ ಜಾತಿ ನಮೂದಿಸಿದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.