

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕು ಗ್ರಾಮೀಣ ವಲಯ ಮಟ್ಟದ ಪ್ರೌಢ ಶಾಲಾ ಶಿಕ್ಷಕರ ವಿಜ್ಞಾನ ಕಾರ್ಯಾಗಾರವನ್ನು (ವಿಜ್ಞಾನ ಸ್ಪಂದನ-2023) ನಗರದ ಇಂಪಲ್ಸ್ ಪದವಿಪೂರ್ವ ಕಾಲೇಜ್ನಲ್ಲಿ ಗುರುವಾರ ಏರ್ಪಡಿಸಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಸಹ ಶಿಕ್ಷಕರು ಆಧುನಿಕ ಬೋಧನಾ ಪದ್ಧತಿಯೊಂದಿಗೆ ಮಕ್ಕಳಲ್ಲಿ ಕಲಿಕಾಸಕ್ತಿ ಬೆಳೆಸಬೇಕು. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸುಲಭವಾಗಲಿದೆ. ಪಠ್ಯಪುಸ್ತಕವನ್ನು ಸರಳ ಮಾದರಿಯಲ್ಲಿ ಬೋಧಿಸುವ ಕ್ರಿಯಾ ಯೋಜನೆ ರೂಪಿಸಬೇಕೆಂದು ಸಲಹೆ ನೀಡಿದರು.
ಕಾಲೇಜಿನ ಅಕಾಡೆಮಿಕ್ ಡೈರೆಕ್ಟರ್ ಎಸ್.ಬಿ. ಹಿರೇಮಠ ಮಾತನಾಡಿ, ಕೃತಕ ಬುದ್ಧಿಮತ್ತೆ ಬಳಸುವುದರಿಂದ ಅಸಾಧ್ಯವಾದುದನ್ನು ಸಾಧಿಸಲು ವಿಜ್ಞಾನದಿಂದ ಸಾಧ್ಯವೆಂದರು.
ಪ್ರಾಂಶುಪಾಲ ಬಸವರಾಜ ಚಿನಿವಾಲರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತಾಧಿಕಾರಿಗಳಾದ ಕುಮಾರಿ ಐಶ್ವರ್ಯಾ ಪಿ.ಎಸ್. ಆರ್.ಬಿ. ಪಾಟೀಲ, ಪ್ರತಿಭಾ ಹೂಗಾರ, ಸಂಜೀವ ಭೂಶೆಟ್ಟಿ, ಎಸ್.ಬಿ. ಬಾವಿಕಟ್ಟಿ ಇತರರು ಉಪಸ್ಥಿತರಿದ್ದರು. ಹುಬ್ಬಳ್ಳಿ ತಾಲೂಕು ಗ್ರಾಮೀಣ ವಲಯದ 70ಕ್ಕೂ ಹೆಚ್ಚು ಪ್ರೌಢ ಶಾಲೆಗಳ ಸಹಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಣ ಸಂಯೋಜಕ ಮೃತ್ಯುಂಜಯ ಜಡಿಮಠ ವಂದಿಸಿದರು.