

ಮುಂಡಗೋಡ: ಪ್ರತಿ ವಿಭಾಗದ ಸಿಬ್ಬಂದಿ ನಮ್ಮದೆ ಸಂಸ್ಥೆ ಎಂಬ ಮನೊಭಾವದಿಂದ ಕೆಲಸ ನಿರ್ವಹಿಸಿ ಸಂಸ್ಥೆಗೆ ಹೆಚ್ಚು ಲಾಭವನ್ನು ತಂದು ಕೊಡುವ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ಸಂಸ್ಥೆಯ ಆವರಣದಲ್ಲಿರುವ ಅಕ್ಕಿಮಿಲ್ನಿಂದ ಸಂಘಕ್ಕೆ ಲಾಭವಾಗುತ್ತಿಲ್ಲ. ಅದನ್ನು ಬೇರೆಯವರಿಗೆ ಬಾಡಿಗೆ ನೀಡುವಂತೆ ಸಲಹೆ ನೀಡಿದರು.
ಕೆಡಿಸಿಸಿ ಬ್ಯಾಂಕ್ ನಿರ್ದೆಶಕ ಎಲ್.ಟಿ. ಪಾಟೀಲ ಮಾತನಾಡಿ, ಈ ಹಿಂದೆ ಸಂಸ್ಥೆ ನಷ್ಟದತ್ತ ಸಾಗಿತ್ತು. ಇದೀಗ ಲಾಭದತ್ತ ಹೆಜ್ಜೆ ಹಾಕಿರುವುದು ಸಂತಸದ ಸಂಗತಿ ಎಂದರು.
ಸಂಸ್ಥೆಯ ಅಧ್ಯಕ್ಷ ಚೇತನ ನಾಯ್ಕ ಮಾತನಾಡಿ, 2023-24ನೇ ಸಾಲಿಗೆ ಸಂಸ್ಥೆ 19.53 ಲಕ್ಷ ರೂ. ಲಾಭ ಗಳಿಸಿದೆ ಎಂದರು.
ಸಂಘದ ಸದಸ್ಯರಾದ ಸುನೀಲ ವೇರ್ಣೆಕರ, ಸಂತೋಷ ಬೋಸ್ಲೆ, ಪರಶುರಾಮ ತಹಶೀಲ್ದಾರ್, ಉಮೇಶ ಗಾಣಿಗೇರ, ತಿರುಪತಿ ವಡ್ಡರ, ಮಂಜುನಾಥ ಪಾಟೀಲ, ಕಮಲವ್ವ ಹಂಚಿನಮನಿ, ಬಿ.ಕೆ. ಪಾಟೀಲ, ಮಾಲಾ ಬನವಾಸಿ, ಫಕೀರಪ್ಪ ಚಳಮಟ್ಟಿ, ನಾಗಪ್ಪ ತಳವಾರ, ಕೃಷ್ಣ ವಡ್ಡರ, ವ್ಯವಸ್ಥಾಪಕ ಮಂಜುನಾಥ ರಾವಳೆಕರ ಇತರರಿದ್ದರು.