ಉನ್ನತ ಶಿಕ್ಷಣ ನೀಡಲು ಸಲಹೆ

MBL-21-2
ಮುದ್ದೇಬಿಹಾಳ ತಾಲೂಕಿನ ಕೇಸಾಪೂರದಲ್ಲಿ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಎಸ್.ಎಸ್. ಹುಲ್ಲೂರ, ಶಿಲ್ಪಾ ಕುದರಗೊಂಡ, ಕೆಂಚಪ್ಪ ಬಿರಾದಾರ, ಬಿ.ಕೆ. ಬಿರಾದಾರ, ಮಲ್ಲಿಕಾರ್ಜುನ ಮದರಿ ಇತರರಿದ್ದರು.
Published on

ಮುದ್ದೇಬಿಹಾಳ: ಶಿಕ್ಷಣ ಪಡೆದುಕೊಂಡವರು ತಮ್ಮ ಹಕ್ಕುಗಳ ಬಗ್ಗೆ ಧ್ವನಿ ಎತ್ತುವುದಕ್ಕೆ ಸಾಧ್ಯವಿದೆ. ತಾಯಂದಿರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕೆಂದು ನಿವೃತ್ತ ಡಿವೈಎಸ್ಪಿ ಎಸ್.ಎಸ್. ಹುಲ್ಲೂರ ಹೇಳಿದರು.

ತಾಲೂಕಿನ ಕೇಸಾಪೂರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನಕದಾಸರ 535ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಣದಿಂದ ಸಂಘಟಿತರಾಗಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದಾಗಿದೆ. ನಾವು ಎಲ್ಲಿಯವರೆಗೆ ನಾವು ಜಾಗೃತರಾಗುವುದಿಲ್ಲವೋ ಅಲ್ಲಿವರೆಗೆ ನಮ್ಮ ಹಕ್ಕುಗಳು ಸಿಗುವುದಿಲ್ಲ. ಹೀಗಾಗಿ ಸಂತರ ಆದರ್ಶಗಳನ್ನು ಮೈಗೂಡಿಸಿಕೊಂಡು ಹೋರಾಟ ಮಾಡಬೇಕು ಎಂದರು.

ಕುರುಬ ಸಮಾಜದ ನಾಯಕಿ ಶಿಲ್ಪಾ ಕುದರಗೊಂಡ, ಕೆಂಚಪ್ಪ ಬಿರಾದಾರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಬಿರಾದಾರ, ಕುರುಬರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಮಾತನಾಡಿದರು.

ಎಂ.ಎಸ್. ದೇಶಮುಖ, ಮಲ್ಲಿಕಾರ್ಜುನ ಗುರುವಿನ, ಬಸಯ್ಯ ಗುರುವಿನ, ಅಮರೇಶ ಹಿರೇಮಠ, ಸಂಗಯ್ಯ ಹಿರೇಮಠ, ಗಿರೀಶಗೌಡ ಪಾಟೀಲ, ನಾಗರಾಜ ಹಿರೇಕುರಬರ, ವೈ.ಬಿ. ತಳವಾರ, ನಾಗೇಶ ಹಡಪದ, ಅಮರೇಶ ಸಂಗಮ, ಜಿ.ಜಿ. ಗೌಡರ, ಮುದಕಪ್ಪ ಹೊಕ್ರಾಣಿ, ದೇವು ವಾಲಿಕಾರ, ವಿರೇಶ ನೆರಬೆಂಚಿ, ಸಂಗನಗೌಡ ಪಾಟೀಲ, ಸಂಗಣ್ಣ ಭೋವಿ, ಶ್ರೀನಿವಾಸ ಗೌಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net