ಬೆಲೆ ನಿಗದಿಗೆ ಐದು ದಿನಗಳ ಗಡುವು ರೈತ ಸಂಘಟನೆಗಳ ಪ್ರಮುಖರ ಸಭೆ

farmers meeting (1)
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.40814796, 0.42858317);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 40;
Published on

ಬೆಳಗಾವಿ: ರೈತರ ಪ್ರತಿ ಟನ್ ಕಬ್ಬಿಗೆ ಮೊದಲ ಕಂತಾಗಿ 3,500ರೂ. ಬೆಲೆ ನೀಡುವಂತೆ ಆಗ್ರಹಿಸಿ ಜಿಲ್ಲೆಯಾದ್ಯಂತ ಕೈಗೊಂಡಿರುವ ರೈತರ ಹೋರಾಟವನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಲು ರೈತಪರ ಸಂಘಟನೆಗಳು ನಿರ್ಧರಿಸಿದ್ದು ಬೆಲೆ ನಿಗದಿಗೆ ಸರ್ಕಾರ ಮತ್ತು ಕಾರ್ಖಾನೆಗಳ ಮಾಲೀಕರಿಗೆ ಐದು ದಿನಗಳ ಗಡುವು ನೀಡಿದ್ದಾರೆ.

ಕಳೆದ ಐದು ದಿನಗಳಿಂದ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ಮುಂದುವರೆದಿರುವ ರೈತರ ಹೋರಾಟ ತೀವ್ರಗೊಂಡಿದ್ದು, ಈಗಾಗಲೇ ಜಿಲ್ಲೆಯ ವಿವಿಧೆಡೆಯೂ ಪ್ರತಿಭಟನೆಗಳು ಶುರುವಾಗಿವೆ. ಈ ಮಧ್ಯೆ ಭಾನುವಾರ ಗುರ್ಲಾಪುರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, 3200ರೂ. ದರಕ್ಕೆ ಕಾರ್ಖಾನೆ ಮಾಲೀಕರನ್ನು ಒಪ್ಪಿಸುವ ಭರವಸೆ ನೀಡಿದ್ದರು. ಆದರೆ ಇದಕ್ಕೆ ಪ್ರತಿಭಟನಕಾರರು ಒಪ್ಪದ ಕಾರಣ ಸಂಧಾನ ಸಭೆ ವಿಫಲವಾಗಿದೆ. ಈ ಹಿನ್ನೆಲೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ರಾಜ್ಯದ ವಿವಿಧ ರೈತ ಸಂಘಟನೆಗಳ ಪ್ರಮುಖರು ಸಭೆ ಕೈಗೊಂಡು ಹೋರಾಟ ತೀವ್ರಗೊಳಿಸಲು ನಿರ್ಧರಿಸಿದರು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾರತೀಯ ಕೃಷಿಕ ಸಮಾಜ ಮುಖಂಡ ಸಿದಗೌಡ ಮೋದಗಿ ಮಾತನಾಡಿ, ಪ್ರತಿ ಟನ್ ಕಬ್ಬಿಗೆ ಸಾಗಾಣಿಕೆ ಮತ್ತು ಕಟಾವು ವೆಚ್ಚ ಹೊರತು ಪಡಿಸಿ ಮೊದಲ ಕಂತಾಗಿ 3,500ರೂ. ದರ ನೀಡಬೇಕೆಂಬ ಬೇಡಿಕೆ ಅಚಲವಾಗಿದೆ. ನಿನ್ನೆ ಗುರ್ಲಾಪುರ ಹೋರಾಟಕ್ಕೆ ಬಂದಿದ್ದ ಜಿಲ್ಲಾಧಿಕಾರಿ, ಕಾರ್ಖಾನೆ ಮಾಲೀಕರ ಪರವಾಗಿ ಮಧ್ಯಸ್ಥಿಕೆ ವಹಿಸಿದಂತೆ ಮಾಡಿದ್ದು, ಇದು ಖಂಡನೀಯ. ಅವರಿಗೆ ರೈತಪರ ಕಾಳಜಿಯಿದ್ದಲ್ಲಿ ಈ ಕೂಡಲೇ ಕಾರ್ಖಾನೆ ಮಾಲೀಕರನ್ನು 3,500ರೂ. ಬೆಲೆಗೆ ಒಪ್ಪಿಸಬೇಕು. ಇದಕ್ಕಾಗಿ ನಾವು ಐದು ದಿನಗಳ ಗಡುವು ನೀಡುತ್ತಿದ್ದೇವೆ. ಅಷ್ಟರೊಳಗೆ ಬೇಡಿಕೆ ಈಡೇರದಿದ್ದಲ್ಲಿ ರಾಜ್ಯವ್ಯಾಪಿ ಪ್ರತಿ ತಾಲೂಕಿನಲ್ಲಿ ಹೋರಾಟ ಆರಂಭಿಸಲಾಗುವುದು ಎಂದು ಹೇಳಿದರು.

ಗುರ್ಲಾಪುರ ಹೋರಾಟಕ್ಕೆ ರಾಜ್ಯದ ಅನೇಕ ಕಡೆಗಳಿಂದ ರೈತರು, ಸಂಘಟಕರು ಬರುತ್ತಿದ್ದಾರೆ. ಈ ಹೋರಾಟ ಇನ್ನಷ್ಟು ತೀವ್ರಗೊಳಿಸುವ ವಿಚಾರವಾಗಿ ಇಂದಿನ ಸಭೆಯಲ್ಲಿ ಪ್ರಮುಖ ಹೋರಾಟಗಾರರು ಚರ್ಚಿಸಿದ್ದೇವೆ. ಭಾರತೀಯ ಕೃಷಿಕ ಸಮಾಜ, ರಾಜ್ಯ ರೈತ ಸೇನಾ, ಕರ್ನಾಟಕ ರೈತ ಸಂಘ, ಸ್ವಾಭಿಮಾನಿ ಶೇತ್ಕರಿ ಸಂಘ ಸೇರಿದಂತೆ ವಿವಿಧ ರೈತ ಸಂಘಟನೆಗಳ ಪ್ರಮುಖರು ಸಭೆಯಲ್ಲಿದ್ದರು ಎಂದು ವಿವರಿಸಿದರು.

ಮಾಜಿ ಸಚಿವ ಶಶಿಕಾಂತ ನಾಯಿಕ, ಶಂಕರ ಅಂಬಲಿ, ಸುಭಾಷ ಶಿರಬೂರ, ಬಸವರಾಜ ಕರಿಗಾರ, ಶಂಕರಗೌಡ ಪಾಟೀಲ, ಶಿವಲೀಲಾ ಮೀಸಾಳೆ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net