ಕಬ್ಬು ದರದಲ್ಲಿ ತಾರತಮ್ಯ ಬೇಡ

7Sambaragi2
ಮಹಾರಾಷ್ಟ್ರದ ಡಪಳಾಪುರ ಶ್ರೀಪತಿ ಶುಗರ್ಸ್‌ ವ್ಯವಸ್ಥಾಪಕ ನಿರ್ದೇಶಕ ಜೋಶಿ ಇವರಿಗೆ ರೈತರು ಮನವಿ ಸಲ್ಲಿಸಿದರು. ಕಿರಣ ಮಿಸಾಳ, ರಮೇಶ ಕುಂಬಾರ, ರಾಮಗೌಡ ಪಾಟೀಲ ಇತರರಿದ್ದರು.
Published on

ಸಂಬರಗಿ: ಜತ್ತ ತಾಲೂಕಿನ ಡಪಳಾಪುರ ಗ್ರಾಮದ ಶ್ರೀಪತಿ ಶುಗರ್ಸ್‌ ಪವರ್ ಕಾರ್ಖಾನೆಗೆ ಅಥಣಿ ಹಾಗೂ ಕಾಗವಾಡನಿಂದ ಕಬ್ಬು ಸಾಗಣೆ ಮಾಡಿದ್ದಾರೆ. ಅಂತಹ ರೈತರಿಗೆ ಟನ್‌ಗೆ ಅರ್ಧ ಕೆಜಿ ಸಕ್ಕರೆ, ಕಳೆದ ವರ್ಷದ ಎರಡನೇ ಕಂತು ಹಾಗೂ ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರ ನೀಡಬೇಕೆಂದು ಅಥಣಿ ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ ನೇತೃತ್ವದಲ್ಲಿ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಜೋಶಿ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು. ಕಳೆದ ವರ್ಷ ಟನ್‌ಗೆ 3 ಸಾವಿರ ರೂ. ನೀಡಿದ್ದಾರೆ. ಎರಡನೇ ಕಂತು ಘೋಷಣೆ ಮಾಡಬೇಕು. ಮಹಾರಾಷ್ಟ್ರದ ಕಾರ್ಖಾನೆಗಳು ಕರ್ನಾಟಕದ ರೈತರ ಕಬ್ಬಿನ ಮೇಲೆ ನಡೆಯುತ್ತಿವೆ. ಕಾರ್ಖಾನೆ ಮಾಲೀಕರು ದರದಲ್ಲಿ ತಾರತಮ್ಯ ಮಾಡಬಾರದು ಎಂದು ಮನವಿ ಮಾಡಿದರು.

ಕಾರ್ಖಾನೆ ವ್ಯವ ಸ್ಥಾಪಕ ನಿರ್ದೇಶಕ ಜೋಶಿ ಅವರನ್ನು ಸಂಪರ್ಕಿಸಿದಾಗ ಪ್ರತಿಟನ್‌ಗೆ 3 ಸಾವಿರ ರೂ. ನೀಡಿದ್ದೇವೆ. ಜತ್ತ ತಾಲೂಕಿನ ಯಾವುದೇ ಕಾರ್ಖಾನೆಗಳು ಎರಡನೇ ಕಂತು ಹಾಕಿದರೆ, ಆಗ ಎಂಡಿ ಮುಂದಿಟ್ಟು ಕ್ರಮ ಕೈಗೊಳ್ಳಲಾಗುವುದು ಎಂದರು. ಕಿರಣ ಮಿಸಾಳ, ರಮೇಶ ಕುಂಬಾರ, ರಾಮಗೌಡ ಪಾಟೀಲ, ಮಹಮ್ಮದ್ ಜಮಾದಾರ, ಬಾಳಪ್ಪ ಕೋಳೆಕರ, ಮಲ್ಲಿಕಾರ್ಜುನ ಶೇಗನೆ, ಭೀಮು ಮಿಸಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net