ಕಬ್ಬು ಅರಿಯುವ ಸಾಮರ್ಥ್ಯ ಹೆಚ್ಚಳ

24blh2 ಸೋಮೇಶ್ವರ ಸಕ್ಕರೆ ಕಾರ್ಖಾನೆ
???????
Published on

ಬೈಲಹೊಂಗಲ: ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುತ್ತಿದ್ದು, ಕಾರ್ಖಾನೆ ಕಬ್ಬು ಅರೆಯುವ ಸಾಮರ್ಥ್ಯ 2,500-4,500 ಟಿಸಿಡಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇದರಿಂದ ಕಾರ್ಖಾನೆ ಆದಾಯ ಮತ್ತು ಕಬ್ಬು ಅರೆಯಲು ಆನುಕೂಲವಾಗಲಿದೆ ಎಂದು ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ ಹೇಳಿದರು.

ತಾಲೂಕಿನ ಸಿದ್ಧ್ದಸಮುದ್ರ ಬಳಿಯ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಹಂಗಾಮಿನಲ್ಲಿ ಆರ್ಥಿಕ ಸಂಕಷ್ಟದ ಮಧ್ಯೆಯೂ ಕಬ್ಬು ಬೆಳೆಗಾರರ ಸಮಸ್ಯೆ ಅರಿತು ಸುಮಾರು 20,6172 ಮೆಟ್ರಿಕ್ ಟನ್ ಕಬ್ಬು ಅರೆದು ಶೇ.12.53 ಸಕ್ಕರೆ ಇಳುವರಿ ಪ್ರಮಾಣದಲ್ಲಿ 2,53,920 ಕ್ವಿಂಟಾಲ್ ಸಕ್ಕರೆ ಉತ್ಪಾದಿಸಿ ರೈತರ ಬಿಲ್ ಪಾವತಿಸಲಾಗಿದೆ ಎಂದರು.

ನಿರ್ದೇಶಕ ರಾಚಪ್ಪ ಮಟ್ಟಿ ಮಾತನಾಡಿ, ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ತನಿಖೆಯಾಗಬೇಕೆಂದು ಆಗ್ರಹಿಸಿದರು. ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಪಾಟೀಲ, ನಿರ್ದೇಶಕ ಮಹಾಂತೇಶ ಮತ್ತಿಕೊಪ್ಪ ಮಾತನಾಡಿದರು.

ಕಾರ್ಯದರ್ಶಿ ಅಶೋಕ ಬೊಮ್ಮಣ್ಣವರ ವಾರ್ಷಿಕ ವರದಿ ಮಂಡಿಸಿದರು.ಉಪಾಧ್ಯಕ್ಷ ರಾಜು ಕುಡಸೋಮನ್ನವರ, ನಿರ್ದೇಶಕರಾದ ಉಮೇಶ ಬಾಳಿ, ಪ್ರಕಾಶ ಮೂಗಬಸವ, ಕಾರ್ತಿಕ ಮಲ್ಲೂರ, ಅಶೋಕ ಯರಗೊಪ್ಪ, ಮಲ್ಲಪ್ಪ ಅಷ್ಟಗಿ, ಅನಿತಾ ಮೆಟಗುಡ್ಡ, ಕಸ್ತೂರಿ ಸೋಮನಟ್ಟಿ, ಅದೃಶಪ್ಪ್ಪ ಕೋಟಬಾಗಿ, ಅಶೋಕ ಬಾಳೇಕುಂದರಗಿ, ರಾಮಚಂದ್ರ ಕಕ್ಕಯ್ಯನವರ, ಸಣ್ಣಭೀಮಶೇಪ್ಪ ಅಂಬಡಗಟ್ಟಿ, ರಾಜಶೇಖರ ಎತ್ತಿನಮನಿ, ಶ್ರೀಶೈಲ ಶರಣಪ್ಪನವರ, ಶಿವಾನಂದ ಧೂತಗುಂಡಿ, ಬಸವರಾಜ ಬೋಳಗೌಡ್ರ, ಶ್ರೀಶೈಲ ಮೂಗಬಸವ, ಸಿದ್ಧನಗೌಡ ಪಾಟೀಲ, ಬಾಬು ಖಂಡೋಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net