ಕಬ್ಬು ಬೆಳೆಗಾರರ ಹಿತವೇ ಧ್ಯೇಯ - ಕಲ್ಲಪ್ಪಣ್ಣ ಮಗೆಣ್ಣವರ

01001
Published on

ಕಾಗವಾಡ: ಕಬ್ಬು ಬೆಳೆಗಾರರ ಹಿತ ಕಾಪಾಡುವುದೆ ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಧ್ಯೇಯವಾಗಿದೆ. ಕಬ್ಬು ಬೆಳೆಗಾರರಿಗೆ ಯೋಗ್ಯ ಬೆಲೆ ನೀಡಿ ಕಬ್ಬು ಖರೀದಿಸಲಾಗುವುದು ಎಂದು ಕಾಗವಾಡದ ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ, ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆಣ್ಣವರ ಹೇಳಿದರು.

ಕಾಗವಾಡದ ಶಿರಗುಪ್ಪಿ ಸಕ್ಕರೆ ಕಾರ್ಖಾನೆಯ 9ನೇ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ್ ಪ್ರದೀಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸಕ್ತ ಹಂಗಾಮಿನಲ್ಲಿ ರೈತರಿಗೆ ಯೋಗ್ಯ ಬೆಲೆ ನೀಡಿ, ಸುಮಾರು 7 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಕಬ್ಬು ಬೆಳೆಗಾರರು ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸುವಂತೆ ಮನವಿ ಮಾಡಿದರು.

ನಾಂದನಿಯ ಸ್ವಸ್ತಿ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ನಿಡಸೋಶಿಯ ಸಿದ್ಧಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶೀತಲ ಮಗೆಣ್ಣವರ ದಂಪತಿ ಪೂಜೆ ನೆರವೇರಿಸಿದರು.

ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕಲ್ಲಪ್ಪಣ್ಣ ಮಗೆಣ್ಣವರ, ಡಾ. ರಮೇಶ ದೊಡ್ಡಣ್ಣವರ, ಡಾ. ಪೃಥ್ವಿ ದೊಡ್ಡಣ್ಣವರ, ಅರುಣ ಫರಾಂಡೆ, ರಾಜಗೌಡ ಸುಗಣ್ಣವರ, ಎ.ಕೆ. ಪಾಟೀಲ, ಬಿಮಗೌಡ ಯಳಗೂಡೆ. ಎ.ಕೆ. ಜಯಕನವರ, ಕೌಸ್ತುಭ ಮಗೆಣ್ಣವರ, ಸುಭಾಷ ಖಟಾರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net