ಜಂಟಿ ಸಭೆ ನಡೆಸಲು ಕಬ್ಬು ಬೆಳೆಗಾರರ ಆಗ್ರಹ

Deadline for purchasing FAQ sunflowers
Published on

ಮುಧೋಳ : ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಆಯುಕ್ತರ ಸಭೆ ಶ್ರೀದಲ್ಲಿ ಏರ್ಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೆತ ಸಂದ ಉಪಾಧ್ಯ ಮುತ್ತಪ್ಪ ಕೋಮಾರ ಆಗ್ರಹಿಸಿದರು. ಇಲ್ಲಿನ ತಾಲೂಕು ಆಡಳಿತ ಭವನದಲ್ಲಿ ತಹಸೀಲ್ದಾರ ಮಹದೇವ ಸನಮುರಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ರೈತರ ಸಂ, ಕಬ್ಬು ಬೆಳೆಗಾರರ ಸಂದ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬರುವಂತ ಎಲ್ಲ ಸಕ್ಕರೆ ಕಾರ್ಖಾನೆಯ ಮಾಲೀಕರು ರೈತರು ಹಾಗೂ ಕಬ್ಬು ಆಯುಕ್ತರು ಜಿಲ್ಲಾ ಉಸ್ತುವಾರಿ ಸಚಿವರು ಎಸ್​. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕರ ಸಮ್ಮುಖದಲ್ಲಿ ತ್ವರಿತವಾಗಿ ಸಭೆ ಕರೆದು 2025&26 ಸಾಲಿನ ದರ ನಿಗದಿ ಮಾಡಬೇಕು ಎಂದು ತಿಳಿಸಿದ್ದಾರೆ. ಈ ಸಭೆಗೆ ಸ್ವತ@ ಮಾಲೀಕರೆ ಬಂದರೆ ರೈತರು ತಮ್ಮ ಸಮಸ್ಯೆ ಹೇಳಲು ಅನುಕೂಲವಾಗುತ್ತದೆ ಎಂದು ಹೇಳಿದರು. ಮುಖಂಡರಾದ ಈರಪ್ಪ ಹಂಚನಾಳ, ಬಸಪ್ಪ ಸಂಗಣ್ಣವರ, ಮಲ್ಲು ರಡ್ಯಾರಟ್ಟು, ಬಾಬುಗೌಡ ಪಾಟೀಲ್​, ರಮೇಶ ಹುಣಸಿಕಟ್ಟಿ, ರಮೇಶ ಹೂಗಾರ, ನಾಗೇಶ ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net