ಕಬ್ಬು ಬೆಳೆಗಾರರ ಸಂಘದಿಂದ ಸಿಪಿಐಗೆ ಮನವಿ

MDG MANAVI
Published on

ಮುಂಡರಗಿ: ಸಾಮಾಜಿಕ ಜಾಲತಾಣದಲ್ಲಿ ಕಬ್ಬು ಬೆಳೆಗಾರರ ಬಗ್ಗೆ ಬೇಜವಾಬ್ದಾರಿಯುತ ಹೇಳಿಕೆ ಹರಿಬಿಟ್ಟಿರುವ ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷರ ನಡೆ ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಸೋಮವಾರ ಸಿಪಿಐ ಮಂಜುನಾಥ ಕುಸುಗಲ್ಲ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿ, ಜ. 23ರಂದು ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಅವರು ಸಾಮಾಜಿಕ ಜಾಲತಾಣದಲ್ಲಿ ಕಬ್ಬು ಬೆಳೆಗಾರರ ಬಗ್ಗೆ ಬೇಜವಾಬ್ದಾರಿಯುತ ಹೇಳಿಕೆ ಹರಿಬಿಟ್ಟಿದ್ದಾರೆ. ಅವರು ತಮಗೆ ಮರಳು ಗಣಿಗಾರಿಕೆಯಲ್ಲಿ ತೊಂದರೆ ಕೊಟ್ಟಿದ್ದರೆ ಅಂತವರ ಹೆಸರುಗಳನ್ನು ಕಾಣಿಸಬಹುದಿತ್ತು. ಅವರ ಹೆಸರುಗಳನ್ನು ಬಹಿರಂಗ ಪಡಿಸದೆ ಬರೀ ‘ಕಬ್ಬು ಬೆಳೆಗಾರರು’ ಅಂತ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ತಪ್ಪು ನಿರ್ಧಾರ ಎಂದು ತಿಳಿಸಿದರು. ಸಿಪಿಐ ಪರವಾಗಿ ಸಿಬ್ಬಂದಿ ಮನವಿ ಸ್ವೀಕರಿಸಿದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ ಕೊಳಲ, ಪ್ರಕಾಶ ಸಜ್ಜನರ, ಎಚ್.ಬಿ. ಕುರಿ, ರವಿ ನಾಯ್್ಕ ಶರಣಪ್ಪ ಕಂಬಳಿ, ಹಾಲಪ್ಪ ಬೆನ್ನೂರ, ಈರಣ್ಣ ಮಲ್ಲಾಡದ, ಮರಿಯಪ್ಪ ಹಂಪಸಾಗರ, ಹನುಮಂತಪ್ಪ ಶೀರನಹಳ್ಳಿ, ಈರಪ್ಪ ಮಡಿವಾಳರ, ವಿ.ಕೆ. ಕವಲೂರ, ಹನುಮಂತ ಗುಜನೂರು, ಸಂತೋಷ ಹಳ್ಳಿ, ನಿಂಗಪ್ಪ ಬಂಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net