

ಇಟಗಿ: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಾರಂಭವೋತ್ಸವಕ್ಕೆ ಇಟಗಿ ಗ್ರಾಮದಿಂದ ಸಂಪ್ರದಾಯದಂತೆ ಗುಡದನ್ನವರ ಕುಟುಂಬವು ಕಬ್ಬು ತುಂಬಿದ ಚಕ್ಕಡಿಗೆ ಪೂಜೆ ಸಲ್ಲಿಸಿ ಬುಧವಾರ ಬೀಳ್ಕೊಟ್ಟಿತು. ರಾಣಿ ಶುಗರ್ಸ್ ನಿರ್ದೇಶಕರಾದ ಶ್ರೀಶೆಲ ತುರಮರಿ, ಸುನೀತಾ ಲಂಗೋಟಿ, ಚನ್ನಬಸಪ್ಪ ಗುಡದನ್ನವರ, ಅದೃಶ್ಯ ಗುಡದನ್ನವರ, ಎಸ್.ವಿ.ಬರಗಾಂವಿ, ಡಿ.ಕೆ.ಬಲಗೊಂಡ ಇತರರು ಇದ್ದರು.