ಕಬ್ಬು ಬೆಳೆಗಾರ ಸಂಘದ ಹಿತಸಂರಕ್ಷಣಾ ಸಮಿತಿ ಅಧ್ಯಕ್ಷ ಎನ್ ಎಸ್ ಜಿವೋಜಿ ಮಾತನಾಡಿ ಹಳಿಯಾಳ, ಅಳ್ನಾವರ, ಧಾರವಾಡ ಮತ್ತು ಕಲಘಟಗಿ ಭಾಗದಲ್ಲಿ ಕೇವಲ 35 ರಿಂದ 40 ಕೀಮಿ ವ್ಯಾಪ್ತಿಯಲ್ಲಿ 15 ಲಕ್ಷ ಟನ್ ಕಬ್ಬು ಇರುವ ಬಗ್ಗೆ ಕೃಷಿ ಇಲಾಖೆ ಮಾಹಿತಿ ಇದೆ. ಹಳಿಯಾಳದ ಕಾರ್ಖಾನೆ ಕಳೆದ ವರ್ಷ 9 ಲಕ್ಷ 83 ಸಾವಿರ ಟನ್ ಕಬ್ಬು ನುರಿಸಿದೆ ಹೀಗಿರುವಾಗ ನೂರಾರು ಕೀಮಿ ವ್ಯಾಪ್ತಿ ತೋರಿಸಿ ಏಕೆ ಹೋರಗಿನಿಂದ ಕಬ್ಬು ತಂದು ಆ ದರವನ್ನು ಈ ವ್ಯಾಪ್ತಿಯ ರೈತರಿಗೆ ಹೊರೆಯಾಗಿಸಿ ದರದಲ್ಲಿ ಹಾನಿ ಮಾಡುತ್ತಿದ್ದಾರೆಂದು ಜಿವೋಜಿ ಪ್ರಶ್ನೀಸಿದರು.