

ಮುಂಡರಗಿ: ತಾಲೂಕಿನ ಕಕ್ಕೂರು, ಕಕ್ಕೂರುತಾಂಡಾ ಮತ್ತಿತರೆಡೆ ಮಂಗಳವಾರ ಬೀಸಿದ ಬಿರುಗಾಳಿಯಿಂದಾಗಿ ಕಬ್ಬು ಬೆಳೆ ನೆಲಕಚ್ಚಿದೆ.
ಸಂಜೆ ನಾಲ್ಕು ಗಂಟೆಗೆ ಸುಮಾರಿಗೆ ಆರಂಭವಾದ ಭಾರಿ ಗಾಳಿಯು ಗಂಟೆಗೂ ಹೆಚ್ಚುಕಾಲ ಬೀಸಿತು.
ಮೂರು ಎಕರೆ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿದ್ದ ಕಬ್ಬು ಸಂಪೂರ್ಣವಾಗಿ ಧರೆಗುರುಳಿದೆ. ಆರು ತಿಂಗಳಿನಿಂದ ನೀರು, ಗೊಬ್ಬರ ನೀಡಿ ಕಷ್ಟಪಟ್ಟು ಬೆಳೆಸಿರುವ ಕಬ್ಬು ನೆಲಕಚ್ಚಿದೆ. ಸಕ್ಕರೆ ಕಾರ್ಖಾನೆಯವರು ಬಿದ್ದಿರುವ ಕಬ್ಬನ್ನು ಬೀಜಕ್ಕಾಗಿ ಖರೀದಿಸಿದರೆ ಖರ್ಚಾದರೂ ಉಳಿಯುತ್ತದೆ ಎಂದು ಕಕ್ಕೂರು ಗ್ರಾಮದ ರೈತ ರಂಗಪ್ಪ ನಿಟ್ಟಾಲಿ ವಿನಂತಿಸಿದ್ದಾರೆ.