ತಂಗಳಗೆರೆ ಸಮೀಪ ವಿದ್ಯುತ್ ಶಾಕ್: ಎರಡು ಎಕರೆಯಲ್ಲಿ ಬೆಳೆದುನಿಂತಿದ್ದ ಕಬ್ಬಿಗೆ ಬೆಂಕಿ

3
Published on

ಮಂಡ್ಯ: ತಾಲೂಕಿನ ತಂಗಳಗೆರೆ ಸಮೀಪ ಗುರುವಾರ ಸಂಜೆ ವಿದ್ಯುತ್ ತಗುಲಿ ಸುಮಾರು ಎರಡು ಎಕರೆಯಲ್ಲಿದ್ದ ಕಬ್ಬಿಗೆ ಬೆಂಕಿ ಬಿದ್ದ ನಷ್ಟವಾಗಿದೆ. ಮಮತಾ ಎಂಬುವರಿಗೆ ಸೇರಿದ ಜಮೀನಿನಲ್ಲಿ ಅವಘಡ ಸಂಭವಿಸಿದೆ. ಈ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶುಕ್ರವಾರ ಬೆಳಗ್ಗೆ ಶಾಸಕ ರವಿಕುಮಾರ್ ಗಣಿಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಂತೆಯೇ ವೈಯಕ್ತಿಕ ಪರಿಹಾರ ನೀಡಿದರು. ಮಾತ್ರವಲ್ಲದೆ ಸರ್ಕಾರದಿಂದಲೂ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net