ಕಬ್ಬಿನ ಬೆಳೆ ಮಧ್ಯೆ ಪತ್ತೆಯಾದ ಗಾಂಜಾ ಗಿಡ

0201
Published on

ಕುಡಚಿ: ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಜಮೀನೊಂದರಲ್ಲಿ ಗಾಂಜಾ ಬೆಳೆದಿದ್ದ ಇಬ್ಬರನ್ನು ಕುಡಚಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಲಕ್ಕಪ್ಪ ಸತ್ಯಪ್ಪ ಖೋತ, ಲಕ್ಷ್ಮಣ ಲಕ್ಕಪ್ಪ ಖೋತ ಬಂಧಿತರು. ಕಬ್ಬಿನ ಬೆಳೆ ಮಧ್ಯೆ ಬೆಳೆದಿದ್ದ ಅಂದಾಜು 120 ಕೆ.ಜಿ. ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪಿಎಸ್‌ಐ ಶಿವರಾಜ ಧರಿಗೋಣ, ಸಿಬ್ಬಂದಿ ಪಿ.ಎಲ್. ಖವಟಕೊಪ್ಪ, ಕೆ.ಆರ್. ಸಾಳುಂಕೆ, ಆನಂದ ತೇರದಾಳ, ಎಚ್.ಎಸ್. ಗುಡ್ಡದ, ಆನಂದ ಪೂಜೇರಿ, ಎ.ಎ. ಮುದ್ನಾಳ, ಎಂ.ಕೆ. ಯಲ್ಲಟ್ಟಿ ಇತರರು ಕಾರ್ಯಾಚರಣೆ ನಡೆಸಿದ್ದಾರೆ.

ನಾಗರಮುನ್ನೋಳಿ ವರದಿ: ಸಮೀಪದ ಬೆಳಗಲಿ ಗ್ರಾಮದ ಹೊರವಲಯದಲ್ಲಿ ಕಬ್ಬಿನ ಬೆಳೆ ಮಧ್ಯೆ ಬೆಳೆದಿದ್ದ ಸುಮಾರು 36 ಸಾವಿರ ರೂ. ಮೌಲ್ಯದ 17.5 ಕೆ.ಜಿ. ಗಾಂಜಾ ವಶಪಡಿಸಿಕೊಂಡಿರುವ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಶಿವಪ್ಪ ಶಿರಗಾವಿ ಬಂಧಿತ ವ್ಯಕ್ತಿ. ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ರಾಕೇಶ ಬಗಲಿ ನೇತೃತ್ವದಲ್ಲಿ ಪಿ.ಬಿ. ಮಾರವಣಕೊಪ್ಪ, ಬಿ.ಎಚ್. ಮಾಳಿ, ಆರ್.ಆರ್. ಕರಿಗಾರ, ಎಸ್.ಎಂ. ಚೌಗಲಾ, ಬಿ.ಎ. ಲಕ್ಕಣ್ಣವರ, ಅರ್.ಎಲ್. ಶಿಳಣ್ಣವರ, ಆರ್.ಜಿ. ಭೋಸಲೆ, ಕೆ.ವಿ. ಚಳಿಕೇರಿ, ದಿಲೀಪ್ ಬಸನಾಯ್ಕರ್, ಆರ್.ಎಲ್. ಖೋತ, ವಿಠ್ಠಲ ಇಟ್ನಾಳೆ ಕಾರ್ಯಾಚರಣೆ ನಡೆಸಿದ್ದರು. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net