ಕಾಡಾನೆಗಳ ದಾಳಿಗೆ ಕಬ್ಬು, ಬಾಳೆ ಬೆಳೆ ನಾಶ

ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದ ರೈತ ಪುಟ್ಟಸ್ವಾಮಿ ಅವರ ಬಾಳೆ ಬೆಳೆಯನ್ನು ಕಾಡಾನೆಗಳು ನಾಶ ಮಾಡಿರುವುದು.
ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದ ರೈತ ಪುಟ್ಟಸ್ವಾಮಿ ಅವರ ಬಾಳೆ ಬೆಳೆಯನ್ನು ಕಾಡಾನೆಗಳು ನಾಶ ಮಾಡಿರುವುದು.
Published on

ನಂಜನಗೂಡು: ತಾಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಮೂರು ಕಾಡಾನೆಗಳು ಕಬ್ಬು, ಬಾಳೆ ಬೆಳೆಯನ್ನು ನಾಶ ಮಾಡಿವೆ.

ಗ್ರಾಮದ ನಿವಾಸಿ ಪುಟ್ಟಸ್ವಾಮಿ ಅವರಿಗೆ ಸೇರಿದ ಬಾಳೆ ಮತ್ತು ಶಿವಣ್ಣ ಅವರಿಗೆ ಸೇರಿದ ಕಬ್ಬು ಬೆಳೆಯನ್ನು ತಿಂದ ಬಳಿಕ ತುಳಿದು ನಾಶ ಮಾಡಿವೆೆ.

ಓಂಕಾರ್ ಅರಣ್ಯ ಪ್ರದೇಶ ಸಮೀಪ ಈ ಜಮೀನುಗಳು ಇದ್ದು, ಎರಡು ವರ್ಷದಿಂದ 10 ಬಾರಿ ಆನೆಗಳ ದಾಳಿಯಿಂದ ರೈತ ಪುಟ್ಟಸ್ವಾಮಿ ತತ್ತರಿಸಿದ್ದಾರೆ. ಅಲ್ಲದೆ ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಅಲೆದು ಸುಸ್ತಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net