

ಬೆಳಗಾವಿ:
ಸಕ್ಕರೆ ಕಾರ್ಖಾನೆಯು ಕಾರ್ಯದಕ್ಷತೆಯಿಂದ ನಡೆಯಲು ಪ್ರಯೋಗಾಲಯದ ವಿಶ್ಲೇಷಣಾ ವರದಿ ಬಹುಮುಖ್ಯವಾದದು ಎಂದು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ.ಆರ್.ಬಿ.ಖಾಂಡಗಾವೆ ಹೇಳಿದರು.
ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಸಕ್ಕರೆ ಕಾರ್ಖಾನೆಯ ಸಕ್ಕರೆ ಕಾರ್ಖಾನೆಯ ಪ್ರಯೋಗಾಲಯದ ವಿಶ್ಲೇಷಣೆ ತಂತ್ರಜ್ಞಾನ ಕುರಿತು ಸಕ್ಕರೆ ಕಾರ್ಖಾನೆಯ ಉತ್ಪಾದನಾ ವಿಭಾಗದಲ್ಲಿರುವ ಪ್ರಯೋಗಾಲಯದ ತಾಂತ್ರಿಕ ಸಿಬ್ಬಂದಿಗೆ ಎರಡು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಸಕ್ಕರೆ ತಂತ್ರಜ್ಞ ಡಾ.ಆರ್. ಎನ್. ಭೊಸಲೆ, ಎಂ. ವ್ಹಿ. ಪಾಟೀಲ್, ರಾಜ್ಯದ ವಿವಿಧ ಕಾರ್ಖಾನೆಗಳ ಸುಮಾರು 40 ತಾಂತ್ರಿಕ ಸಿಬ್ಬಂದಿ ಇದ್ದರು.