4ರಂದು ಸಕ್ಕರೆ ಕಾರ್ಖಾನೆ ಪ್ರಾರಂಭ

 ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಉಪಾಧ್ಯಕ್ಷ ರಾಮಚಂದ್ರ ರಾವ್ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರು ಹಾಗೂ ರೈತ ಮುಖಂಡರ ಸಭೆ ಆಯೋಜಿಸಲಾಗಿತ್ತು. ಚಂದ್ರಶೇಖರ್, ಗೌರಿ ಪ್ರಕಾಶ್, ಪಾಂಡು, ಸತೀಶ್ ಇದ್ದರು.
ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಉಪಾಧ್ಯಕ್ಷ ರಾಮಚಂದ್ರ ರಾವ್ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರು ಹಾಗೂ ರೈತ ಮುಖಂಡರ ಸಭೆ ಆಯೋಜಿಸಲಾಗಿತ್ತು. ಚಂದ್ರಶೇಖರ್, ಗೌರಿ ಪ್ರಕಾಶ್, ಪಾಂಡು, ಸತೀಶ್ ಇದ್ದರು.
Published on

ಮದ್ದೂರು: ಸಕ್ಕರೆ ಕಾರ್ಖಾನೆ (ಕಬ್ಬು ಅರೆಯಲು) ಪ್ರಾರಂಭ ಮಾಡುವ ಉದ್ದೇಶದಿಂದ ಸೋಮವಾರ ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಉಪಾಧ್ಯಕ್ಷ ರಾಮಚಂದ್ರರಾವ್ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರು ಹಾಗೂ ರೈತ ಮುಖಂಡರ ಸಭೆ ಆಯೋಜಿಸಲಾಗಿತ್ತು.

ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ಜು.4ರಂದು ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭ ಮಾಡಲಾಗುತ್ತಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಸಹಕಾರ ಕೊಡಬೇಕೆಂದು ಕೋರಿದರು.

ಕಬ್ಬು ಕಟಾವು ದರ ನಿಗದಿಯಾಗಲಿ ನಂತರ ಉಳಿದ ವಿಷಯ ಮಾತನಾಡೋಣ ಎಂದು ಕಬ್ಬು ಬೆಳೆಗಾರರು ಪಟ್ಟು ಹಿಡಿದರರಲ್ಲದೆ, ಪ್ರಾರಂಭದಿಂದ ಕೊನೆಯವರೆಗೂ ಕಬ್ಬು ಕಟಾವು ದರ ಒಂದೇ ಇರಬೇಕೆಂದು ಆಗ್ರಹಿಸಿದರು.

ಪ್ರಾರಂಭದಿಂದ ಕೊನೆಯವರೆಗೆ ಕಬ್ಬು ಕಟಾವು ದರ 450 ರೂ. ರಿಂದ 700 ರೂ.ಗೆ ನಿಗದಿಯಾಯಿತು. 13 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದ್ದು, ಪ್ರಸಕ್ತ ವರ್ಷ 7 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ. ತನಿ ಹಾಗೂ ಕೂಳೆ ಕಬ್ಬನ್ನು ಸೀನಿಯಾರಿಟಿ ಮೇಲೆ ಕಟಾವು ಮಾಡುವುದು, ಕಬ್ಬು ಕಟಾವಾದ 14 ದಿನದೊಳಗೆ ರೈತರಿಗೆ ಹಣ ಪಾವತಿಸುವುದು, ವಾರಕ್ಕೆ ಎರಡು ದಿನ ಸಕ್ಕರೆಯನ್ನು ರೈತರಿಗೆ ಕೊಡಲು ಅಧಿಕಾರಿಗಳು ಸಭೆಯಲ್ಲಿ ಒಪ್ಪಿಗೆ ಸೂಚಿಸಿದರು.

ಸಂಪನ್ಮೂಲ ಅಧಿಕಾರಿ ಗೌರಿಪ್ರಕಾಶ್, ಸಿಬ್ಬಂದಿ ಪಾಂಡು, ಸತೀಶ ಹಾಗೂ ರೈತ ಮುಖಂಡರಾದ ಎಚ್.ಜಿ.ಪ್ರಭುಲಿಂಗು, ಕೀಳಘಟ್ಟ ನಂಜುಂಡಯ್ಯ, ಸೊ.ಸಿ.ಪ್ರಕಾಶ್, ಗಣೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net