ಕಬ್ಬಿನ ಬಗ್ಯಾಸ್‌ನ ತರಬೇತಿ ಕಾರ್ಯಕ್ರಮ ಯಶಸ್ಸು

WhatsApp-Image-2023-05-29-at-3.25.27-PM-1.jpeg
Published on


ಬೆಳಗಾವಿ: ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಬೆಳಗಾವಿ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ,  ಕಬ್ಬು ಸಂಶೋಧನಾ ಕೇಂದ್ರ ಮಂಡ್ಯ ವತಿಯಿಂದ ದಕ್ಷಿಣ ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಇಂಜಿನಿಯರ್‌ಗಳಿಗೆ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ್ ಬಗ್ಯಾಸ್‌ನಲ್ಲಿ ತೇವಾಂಶ ನಿಯಂತ್ರಣ ಹಾಗೂ ಶೂನ್ಯ ಅಲಭ್ಯತೆಯಿಂದ ವೆಚ್ಚ ಕಡಿತ ತಂತ್ರಜ್ಞಾನ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಜರುಗಿತು.
ಪುಣೆಯ ಮಿಲ್ ಕನ್ಸಲ್ಟೆನ್ಸ್ ತಾಂತ್ರಿಕ ನಿರ್ದೇಶಕ ಕೆ.ಬಿ. ಕಾಳೆ,  ಡಬ್ಲೂ,ಆರ್. ಅಹೇರ್, ರಾಘವೇಂದ್ರ ತೆಗ್ಗಿ , ಸುನೀಲ ಅಳಪ್ಪ ಹಾಗೂ  ದಕ್ಷಿಣ ಕರ್ನಾಟಕ ಸಕ್ಕರೆ ಕಾರ್ಖಾನೆಗಳ 40 ಅಭಿಯಂತರರು ಹಾಗೂ ತಂತ್ರಜ್ಞರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net