ಕಬ್ಬಿನ ಬೆಲೆ ಹೆಚ್ಚಿಸದಿದ್ದರೆ ಕಾನೂನು ಹೋರಾಟ ; ಮಾಹಿತಿ ಹಕ್ಕು ಹೋರಾಟಗಾರ ಗಡಾದ ಎಚ್ಚರಿಕೆ

bhimappagadad-1536649118.jpg
Published on

ಬೆಳಗಾವಿ : ಮಹಾರಾಷ್ಟ್ರ ಸರ್ಕಾರ ಕಬ್ಬಿಗೆ ಹೆಚ್ಚಿನ ದರ ನೀಡಿ, ಮದ್ಯದ ದರವನ್ನು ಕಡಿಮೆ ಮಾಡಿದೆ. ಆದರೆ, ಕರ್ನಾಟಕದಲ್ಲಿ  ಕಬ್ಬಿನ ಬೆಳೆಗೆ ದರ ಕಡಿಮೆ ನೀಡಿ, ಮದ್ಯಕ್ಕೆ ಹೆಚ್ವು ದರ ನಿಗಧಿ ಮಾಡುವ ಮೂಲಕ ರಾಜ್ಯ ಸರ್ಕಾರ ರೈತರು ಮತ್ತು ಮದ್ಯಪ್ರಿಯರಿಗೆ ಮಾಡುತ್ತಿರುವ ಅನ್ಯಾಯ ಸರಿ ಪಡಿಸದಿದ್ದರೆ ಸರ್ಕಾರದ ವಿರುದ್ದ ಕಾನೂನು ಹೋರಾಟ ಮಾಡಲಾಗವುದು ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ  ಎಚ್ಚರಿಸಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರೈತರು ಬೆಳೆದ ಕಬ್ಬಿಗೆ ಯೋಗ್ಯ ಬೆಲೆ ನೀಡದ ಕಾರ್ಖಾನೆಗಳ ವಿರುದ್ದ ಕ್ರಮಕೈಗೊಳ್ಳದ ಸರ್ಕಾರ ಅಬಕಾರಿ ದರವನ್ನು ಹೆಚ್ಚಿಸುತ್ತಲೆ ಇದೆ. 5 ವರ್ಷಗಳ ಅಬಕಾರಿ ಆದಾಯ 1 ಲಕ್ಷ 21 ಸಾವಿರ ಕೋಟಿಯಾಗಿದೆ. ಅದರಂತೆ ಕರ್ನಾಟಕ - ಮಹಾರಾಷ್ಟ್ರಗಳ ಮಧ್ಯದ ದರಗಳಲ್ಲಿ ಭಾರಿ ವ್ಯತ್ಯಾಸ ಇದೆ. ಇವಗಳನ್ನು ಸರಿಪಡಿಸದಿದ್ದರೆ ನ್ಯಾಯಾಲಯಕ್ಕೆ ಮೊರೆ ಹೋಗುವದಾಗಿ ಗಡಾದ ಅವರು ಎಚ್ಚರಿಸಿದ್ದಾರೆ.

ಕಳೆದ 5 ವರ್ಷಗಳಲ್ಲಿ  ರಾಜ್ಯ ಖಜಾನೆಗೆ ಅಬಕಾರಿ ಇಲಾಖೆಯಿಂದ ಸುಮಾರು 1 ಲಕ್ಷ 21 ಸಾವಿರದಾ 158 ಕೋಟಿ ರೂ. ಗಳ ಆದಾಯ ಬಂದಿದೆ. 2018-19 ನೇ ಸಾಲಿನಿಂದ 2022-23ರಲ್ಲಿ 1,02,564 ಕೋಟಿ ರೂ. ಮತ್ತು ಬೀಯರ್ ಮಾರಾಟದಿಂದ 15,071 ಕೋಟಿ ರೂ.  ಹಾಗೂ ಸನ್ನದು ಶುಲ್ಕ 3,111 ಕೋಟಿ ರೂ. ಮತ್ತು ಅಬಕಾರಿ ಇಲಾಖೆಯ ಇತರ ಮೂಲಗಳಿಂದ 201 ಕೋಟಿ ರೂ. ಖಜಾನೆಗೆ ಜಮೆಯಾಗಿದೆ ಎಂದು ವಿವರಿಸಿದರು.
ಕಬ್ಬಿನ ಉಪ ಉತ್ಪನ್ನದಿಂದ ಮದ್ಯ ತಯಾರಿಸಲಾಗುತ್ತಿದೆ. ನೆರೆಯ ಮಹಾರಾಷ್ಟದಲ್ಲಿ ಕಬ್ಬಿಗೆ ಹೆಚ್ಚಿನ ದರ ನೀಡುತ್ತಿದ್ದರೂ ಕೂಡಾ ಅಲ್ಲಿ ಮಧ್ಯದ ದರ ನಮ್ಮ ರಾಜ್ಯಕ್ಕಿಂತಲೂ ಕಡಿಮೆ ಇದೆ. ಮಹಾರಾಷ್ಟ್ರದಲ್ಲಿ ವಿವಿಧ ಮದ್ಯದ ಬ್ರಾೃಂಡಗಳು  ಕಡಿಮೆ ದರದಲ್ಲಿ ಲಭ್ಯವಾಗುತ್ತಿರುವುದರಿಂದ ರಾಜ್ಯದ ಮದ್ಯಪ್ರಿಯರು ಮಹಾರಾಷ್ಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಇದು ರಾಜ್ಯದ ಅಬಕಾರಿ ಆದಾಯದ ಮೇಲೂ  ಪರಿಣಾಮ ಬೀರುತ್ತಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕಬ್ಬು ಹಾಗೂ ಮದ್ಯಕ್ಕೆ ಯೋಗ್ಯ ಬೆಲೆ ನಿಗಡಿಗೊಳಿಸಬೇಕು ಎಂದು ಒತ್ತಾಯಿಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net