ನಿರಂತರ 12ಗಂಟೆಗಳಲ್ಲಿ 325 ಟನ್ ಕಬ್ಬು ಸಾಗಿಸಿ ವಿನೂತನ ದಾಖಲೆ

IMG-20240128-WA0006.jpg
Published on


-35ಜನ ಕಾರ್ಮಿಕರಿಂದ  21 ಟ್ರ್ಯಾಕ್ಟರ್ ಲೋಡಿಂಗ್
ಬೆಳಗಾವಿ:ಒಗ್ಗಟ್ಟಿನಲ್ಲಿ ಬಲವಿದೆ... ಮಾತು ಹಳೆಯದಾದರೂ ಶಕ್ತಿ ಮಾತ್ರ ಕುಂದುವುದಿಲ್ಲ. ಸಾಧನೆಗಳು ಅದನ್ನು ದಾಖಲೆಯಾಗಿ ಬರೆಯುತ್ತವೆ. ಇದೀಗ ಆ ಸಾಧನೆಗೆ  ಕಬ್ಬು ಕಟಾವು ಕಾರ್ಮಿಕರು. ಸೇರ್ಪಡೆಯಾಗಿದ್ದಾರೆ.
ಹೌದು. ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದ ಕಬ್ಬು ಕಟಾವು ಗ್ಯಾಂಗ್ ಕಾರ್ಮಿಕರು ಒಗ್ಗಟ್ಟಿನಲ್ಲಿ ಬಲವಿದೆ. ಒಗ್ಗಟ್ಟಿನಿಂದ ಏನೂ ಬೇಕಾದರೂ ಸಾಧಿಸಬಹುದಾಗಿದೆ ಎಂಬುದನ್ನು ನಿರೂಪಿಸಿದ್ದಾರೆ.
ಗ್ರಾಮದ ಕೃಷಿ ಜಮೀನಿನಲ್ಲಿ ಬೆಳೆದನಿಂತಿದ ಕಬ್ಬನ್ನು ಕಟಾವು‌ ಮಾಡಿದ ಬಳಿಕ ನಿರಂತರ 12 ಗಂಟೆಗಳ ಕಾಲ 21 ಟ್ರ್ಯಾಕ್ಟರ್ ಗಳ 42 ಟೇಲರ್ಗಳಲ್ಲಿ ಕಬ್ಬು ತುಂಬಿ ಸುಮಾರು 325ಟನ್ ಸಾಗಿಸಿದ್ದಾರೆ.

ಕಬ್ಬು ಲೋಡ್ ಮಾಡಿದ ಕಾರ್ಮಿಕರು
ಕಬ್ಬು ಲೋಡ್ ಮಾಡಿದ ಕಾರ್ಮಿಕರು

ಯಂತ್ರೋಪಕರಣಗಳಿಂದ ಆಗದ ಕೆಲಸವನ್ನು ಕೃಷಿ ಕಾರ್ಮಿಕರು ಮಾಡುವ‌ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಮುಧೋಳ ತಾಲೂಕಿನ ನಿರಾಣಿ ಶುಗರ್ಸ್‌ನವರು ಇವರ ಕಬ್ಬು ಖರೀದಿಸಿದ್ದಾರೆ. ಭಾನುವಾರ ಬೆಳಗ್ಗೆ 6ಕ್ಕೆ 35ಜನ ಕಾರ್ಮಿಕರೊಂದಿಗೆ ಆರಂಭಗೊಂಡ ಕಬ್ಬು ಲೋಡಿಂಗ್ ಸಂಜೆ 6ಗಂಟೆ ವೇಳೆಗೆ 21 ಟ್ರ್ಯಾಕ್ಟರ್ ಗಳಲ್ಲಿ 325 ಟನ್ ಕಬ್ಬು ಸಾಗಿಸುವ ಮೂಲಕ ವಿನೂತನ ದಾಖಲೆ ಬರೆದಿದ್ದಾರೆ.
ಪ್ರಸ್ತುತ ದಿನ‌ಮಾನಗಳಲ್ಲಿ ಕಬ್ಬು ಕಟಾವು ಕಾರ್ಮಿಕರ ಈ ದಾಖಲೆಯನ್ನು ಮಾಡುವುದು ಸಾಮಾನ್ಯದ ಕೆಲಸವಲ್ಲ. ಯುವಕರು ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಈ ಕಾರ್ಮಿಕರೇ ಸಾಕ್ಷಿ ಎಂದು ರೈತ ಸಂಘಟನೆಗಳ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net