ಶರಣರ ಮತ್ತು ಸರ್ವಜ್ಞರ ಪಾತ್ರ ಮಹತ್ತರ

1502 Surapura 02
Published on

ಸುರಪುರ: ಸಮಾಜ ಸುಧಾರಣಯಲ್ಲಿ ಶರಣರು ಮತ್ತು ತ್ರಿಪತಿ ಕವಿ ಸರ್ವಜ್ಞರಂತಹ ಕವಿಗಳವರ ಪಾತ್ರ ಮಹತ್ತರವಾಗಿದೆ ಎಂದು ಗ್ರೇಡ್ 2 ತಹಸೀಲ್ದಾರ್ ಸುಫಿಯಾ ಸುಲ್ತಾನ್ ತಿಳಿಸಿದರು.

ನಗರದ ತಹಸಿಲ್ ಕಚೇರಿ ಸಭಾಂಗಣದಲ್ಲಿ ತ್ರಿಪದಿ ಕವಿ ಸರ್ವಜ್ಞ ಮತ್ತು ಕಾಯಕ ಶರಣ ಜಯಂತಿ ಆಚರಣೆ ನಿಮಿತ್ತ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತ್ರಿಪದಿಕವಿ ಸರ್ವಜ್ಞರ ಜಯಂತಿ ಫೆ.20ರಂದು ಮತ್ತು ಕಾಯಕ ಶರಣರ ಜಯಂತಿ ಫೆ.21ರಂದು ಜರುಗಲಿವೆ. ಅಂದಿನ ದಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಜಯಂತಿ ಕಾರ್ಯಕ್ರಮವನ್ನು ಆಚರಿಸಿ ತಾಲೂಕು ಆಡಳಿತದಿಂದ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೂಚಿಸಿದರು.

ಭೀಮರಾಯ ಕುಂಬಾರ, ವೀರಭದ್ರಪ್ಪ ಕುಂಬಾರ, ಅಂಬ್ರೇಶ ಕುಂಬಾರ, ರಾಜು ಕುಂಬಾರ, ಯಲ್ಲಪ್ಪ ಹುಲಕಲ್, ರವಿಕುಮಾರ ದೇವರಗೋನಾಲ, ಹಣಮಂತ ಕಟ್ಟಮನಿ, ಬಲಭೀಮ ದೊಡ್ಡಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net