ಸಂಕಷ್ಟದಲ್ಲಿರುವವರ ಸೇವೆ ಮಾಡಿ

23-Ainapur-1-Web
ಅಥಣಿ ತಾಲೂಕಿನಲ್ಲಿ ಚಿದಾನಂದ ಸವದಿ ಅವರು ಆಹಾರ ಧಾನ್ಯ ವಿತರಿಸಿದರು. ಶಿವಕುಮಾರ ಸವದಿ, ಸುಶೀಲಕುಮಾರ ಪತ್ತಾರ, ಎ.ಎಂ. ಖೋಬ್ರಿ ಇತರರು ಇದ್ದರು.
Published on

ಐನಾಪುರ : ಕರೊನಾ ವೈರಸ್‌ನಿಂದ ಜನ ಸಂಕಷ್ಟದಲ್ಲಿರುವ ಸಮಯದಲ್ಲಿ ಪಕ್ಷದ ಕಾರ್ಯಕರ್ತರು ರಾಜಕೀಯ ಮನಸ್ತಾಪ ಬದಿಗಿಟ್ಟು ಜನಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚಿದಾನಂದ ಸವದಿ ಹೇಳಿದರು.

ಅವರು ಅಥಣಿ ತಾಲೂಕಿನ ತಂಗಡಿ, ಶಿನಾಳ ಹಾಗೂ ಮುರಗುಂಡಿ, ಮಸರಗುಪ್ಪಿ ಗ್ರಾಮಗಳಲ್ಲಿ ಗುರುವಾರ ಬಡವರಿಗೆ ಆಹಾರ ಧಾನ್ಯ ವಿತರಿಸಿ ಮಾತನಾಡಿದರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ನೇತೃತ್ವದಲ್ಲಿ 25 ಸಾವಿರ ಬಿಪಿಎಲ್ ಕುಟುಂಬಗಳಿಗೆ 4 ಸಾವಿರ ಕ್ವಿಂಟಾಲ್ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಈ ಮೂಲಕ ಮತ್ತೊಮ್ಮೆ ಲಕ್ಷ್ಮಣ ಸವದಿಯವರು ಮಾನವೀಯತೆ ಮೆರೆದಿದ್ದಾರೆ. ಕ್ಷೇತ್ರದ ಜನರ ಕಷ್ಟ ದೂರ ಮಾಡಲು ಲಕ್ಷ್ಮಣ ಸವದಿ ಅವರು ಸತ್ಯಸಂಗಮ ಪ್ರತಿಷ್ಠಾನದ ವತಿಯಿಂದ ಆಹಾರ ಧಾನ್ಯ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಕ್ಷೇತ್ರದ ಜನರಿಗೆ ಯಾವುದೇ ಸಮಸ್ಯೆ ಇದ್ದರೂ ಸ್ಪಂದಿಸಲು ಸವದಿ ಕುಟುಂಬ ಸಿದ್ಧವಿದೆ. ಜನರು ಕರೊನಾ ಬರದಂತೆ ಇನ್ನಷ್ಟು ದಿನ ಮನೆಯಲ್ಲಿಯೇ ಇದ್ದು ಲಾಕ್‌ಡೌನ್ ನಿಯಮ ಪಾಲಿಸಬೇಕು. ನಿಮ್ಮ ಮನೆಯ ಬಾಗಿಲಿಗೆ ಪಡಿತರ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು. ಶಿವಕುಮಾರ ಸವದಿ, ಎ.ಎಂ. ಖೋಬ್ರಿ, ಶಿವಾನಂದ ದಿವಾನಮಳ, ಸುಶೀಲಕುಮಾರ ಪತ್ತಾರ, ಶಿವಾನಂದ ನಾಯಿಕ, ಶ್ರೀಶೈಲ ಶೆಲ್ಲೆಪ್ಪಗೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net