ವಿಚಿತ್ರ ಕಾಯಿಲೆಯಿಂದ ನರಳುವ ಯುವಕಗೆ ಬೇಕು ನೆರವು

nithyananda
Published on

ಕುಂದಾಪುರ: ತಾಲೂಕಿನ ತಲ್ಲೂರು ಗ್ರಾಮದ ಉಪ್ಪಿನಕುದ್ರು ಕುಟುಂಬವೊಂದರ ಆಧಾರವಾಗಿದ್ದ ಯುವಕ ವಿಚಿತ್ರ ರೋಗ ಬಾಧೆಯಿಂದ ನರಳುತ್ತಿದ್ದು, ಮೈತುಂಬಾ ಗುಳ್ಳೆ, ಚರ್ಮ ಸುಟ್ಟು ಹೋದಂತಿದ್ದು ವಿಪರೀತ ಯಾತನೆ ಅನುಭವಿಸುತ್ತಿದ್ದಾನೆ.

ಉಪ್ಪಿನಕುದ್ರು ನಿತ್ಯಾನಂದ(38) ಎಂಬುವರು ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಯುವಕ. ವೈದ್ಯರು ದೇಹದಲ್ಲಿ ಹೆಚ್ಚಿರುವ ನಂಜಿನ ಕಾರಣ ಹೀಗಾಗುತ್ತಿದೆ ಎಂದು ಹೇಳುತ್ತಿದ್ದು, ಕಾಯಿಲೆದ ಬಗ್ಗೆ ಈವರೆಗೆ ಖಚಿತವಾಗಿಲ್ಲ. ಇವರ ಈ ಕಾಯಿಲೆ ವೈದ್ಯಲೋಕಕ್ಕೇ ಸವಾಲಾಗಿದ್ದು, ಯುವಕನ ಶರೀರ ನೋಡಲು ಭಯ ಹುಟ್ಟಿಸುತ್ತಿದ್ದು ಚರ್ಮ ಸುಟ್ಟು ಹೋದಂತಿದೆ. ನಿತ್ಯಾನಂದ, ತಂದೆ, ತಾಯಿ ಹಾಗೂ ಮೂವರು ಸಹೋದರರೊಂದಿಗೆ ಉಪ್ಪಿನಕುದ್ರು ಹಾಲು ಡೇರಿ ಸಮೀಪ ನೆಲೆಸಿದ್ದರು. ಇಬ್ಬರು ಹಿರಿಯ ಸಹೋದರರು ಅನಾರೋಗ್ಯದಿಂದ ಬೆನ್ನು ಬೆನ್ನಿಗೆ ಗತಿಸಿದ ಬಳಿಕ ಮನೆಯ ಜವಾಬ್ದಾರಿ ಹೊತ್ತುಕೊಂಡಿದ್ದರು.

ಪುಟ್ಟ ಗುಡಿಸಲಿನಲ್ಲಿ ನೆಲೆಸಿರುವ ತಾಯಿ ಪುತ್ರನ ಸ್ಥಿತಿ ಹೇಳತೀರದು. ದುಡಿಯುವ ಪುತ್ರ ಹಾಸಿಗೆ ಹಿಡಿದಿದ್ದರಿಂದ ಮನೆಯಲ್ಲಿ ಒಂದೊತ್ತಿನ ಊಟಕ್ಕೂ ತತ್ವಾರ. ಸಹಾಯ ಮಾಡಲಿಚ್ಛಿಸುವವರು ನಿತ್ಯಾನಂದ ಅವರ ಎಸ್‌ಬಿಐ ಕುಂದಾಪುರ ಶಾಖೆ, ಉಳಿತಾಯ ಖಾತೆ ಸಂಖ್ಯೆ: 40083896534 (ಐಎಫ್‌ಎಸ್‌ಸಿ ಕೋಡ್: ಎಸ್‌ಬಿಐಎನ್0040150) ಅಥವಾ ಗೂಗಲ್/ಫೋನ್ ಪೇ 9739316123.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net