ಮುಂದಿನ ಜನಾಂಗಕ್ಕೆ ಹಿಂದು ಧರ್ಮದ ಅರಿವು : ಡಾ.ಪ್ರಭಾಕರ ಭಟ್ ಕಲ್ಲಡ್ಕ ಆಶಯ

New Project
Published on

ಬಂಟ್ವಾಳ: ಪಾಶ್ಚಾತ್ಯ ವಿಕೃತಿ ಸಂಸ್ಕೃತಿಯನ್ನು ಅನುಕರಿಸುವ ಪ್ರಯತ್ನ ಇಂದು ನಡೆಯುತ್ತಿದ್ದು, ಹಿಂದು ಧರ್ಮದ ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿಸುವ ಕಾರ್ಯ ಆಗಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದರು.

ಕುಮ್ಡೇಲು ಶ್ರೀ ನಾಗಬ್ರಹ್ಮ ಸನ್ನಿಧಿ ಶ್ರೀ ಕೋರ್ದಬ್ಬು ನೂತನ ಶಿಲಾಮಯ ದೈವಸ್ಥಾನದಲ್ಲಿ ಶ್ರೀ ದೈವಗಳ ಪುನಃ ಪ್ರತಿಷ್ಠಾಪನಾ ಕಲಶಾಭಿಷೇಕ ಮತ್ತು 75ನೇ ವರ್ಷಾವಧಿ ನೇಮದ ಪ್ರಯುಕ್ತ ಸುಧರ್ಮ ಸಭೆಯಲ್ಲಿ ಮಾತನಾಡಿದರು.

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ವಿಶ್ವ ಹಿಂದು ಪರಿಷತ್ ಬಂಟ್ವಾಳ ಪ್ರಖಂಡ ಅಧ್ಯಕ್ಷ ಪ್ರಸಾದ್‌ಕುಮಾರ್ ರೈ, ಉದ್ಯಮಿ ಅಜಿತ್ ಚೌಟ, ದೇವಂದಬೆಟ್ಟು ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿವಾಕರ, ಉದ್ಯಮಿ ಧನರಾಜ ಶೆಟ್ಟಿ ತೇವು, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲ್, ಪುನರ್ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ದೇವಸ್ಯ ಪ್ರಕಾಶ್ಚಂದ್ರ ರೈ, ಅಧ್ಯಕ್ಷ ಉಮೇಶ್ ಸಾಲ್ಯಾನ್ ಬೆಂಜನಪದವು, ಆಡಳಿತ ಮೊಕ್ತೇಸರ ಭಾಸ್ಕರ ಚೌಟ, ಗುರಿಕಾರರಾದ ಕೆ.ಮೋನಪ್ಪ, ಕೆ. ವೆಂಕಪ್ಪ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಉಮೇಶ್ ಶೆಟ್ಟಿ ಬರ್ಕೆ ಸ್ವಾಗತಿಸಿದರು. ಜಗದೀಶ್ ಕಡೆಗೋಳಿ ನಿರೂಪಿಸಿದರು.

ದೈವಗಳ ಪ್ರತಿಷ್ಠಾಪನೆ

ಬುಧವಾರ ಬೆಳಗ್ಗೆ ಗಣಪತಿ ಹೋಮ, ಶ್ರೀ ಕೋರ‌್ದಬ್ಬು ತನ್ನಿಮಾನಿಗ ಮತ್ತು ಪರಿವಾರ ದೈವಗಳ ಪ್ರತಿಷ್ಠಾಪನೆ, ಪ್ರತಿಷ್ಠಾಪನಾ ಪೂಜೆ, ಕಲಶಾಭಿಷೇಕ, ಪರ್ವಪೂಜೆ, ಮಹಾಪೂಜೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net