

ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಅನ್ನಪೂರ್ಣಾ ಸಭಾಭವನದಲ್ಲಿ ದಿ. ಅನ್ನಪೂರ್ಣಾ ಮಹಾಬಲೇಶ್ವರ ಭಟ್ಟ ನಾಗರಕಟ್ಟೆ (ಹೊಸ್ತೋಟ) ಸ್ಮರಣಾರ್ಥ ಸರಸ್ವತಿ ಕಲಾ ಟ್ರಸ್ಟ್ ಹೊಸಗದ್ದೆ ಅವರಿಂದ ಆ. 27ರಂದು ಸಂಜೆ 6ರಿಂದ ಸುಧನ್ವಾರ್ಜುನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಪಾದ ಹೆಗಡೆ ಬಾಳೆಗದ್ದೆ, ಮದ್ದಳೆಯಲ್ಲಿ ಶರತ್ ಹೆಗಡೆ ಜಾನಕೈ ಹಾಗೂ ಚಂಡೆಯಲ್ಲಿ ಭಾರ್ಗವ ಹೆಗ್ಗೋಡು ಸಹಕರಿಸುವರು. ಮುಮ್ಮೇಳದಲ್ಲಿ ಅಭಯ ಪಿ. ಹೆಗಡೆ ಹೊಸಗದ್ದೆ, ಮೈತ್ರಿ ಎನ್. ಸಂಪೇಸರ,ಅಮಿತ್ ಎಂ. ಮಾಣಿಕ್ನಮನೆ, ಭೂಮಿಕಾ ಹೆಗಡೆ ಹೊಸಗದ್ದೆ, ಜನಾರ್ದನ ಎಸ್. ತೊಂಡೆಮಡಿಕೆ, ಅಧಿತಿ ಎನ್. ಹೆಗಡೆ ಶಿರನಾಲೆ, ಆದಿತ್ಯ ಆರ್. ಹೆಗಡೆ ಹೊನ್ನೆಹದ್ದ ಪಾತ್ರನಿರ್ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.