

ಶಿವಮೊಗ್ಗ: ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಸೂರು ಒದಗಿಸಲು ಮುಂದಿನ ದಿನಗಳಲ್ಲಿ ಅಪಾರ್ಟ್ವೆುಂಟ್ ನಿರ್ವಿುಸಲಾಗುವುದು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ತಿಳಿಸಿದರು.
ಒಂದು ಸಾವಿರ ಮನೆಗಳನ್ನು ನಿರ್ವಿುಸಿ ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡ ಸಣ್ಣ ಆದಾಯದ ವ್ಯಕ್ತಿಗಳನ್ನು ಗುರುತಿಸಿ ಮನೆ ಹಂಚಿಕೆ ಮಾಡಲಾಗುವುದು. ಇದಕ್ಕಾಗಿ ಸೋಮಿನಕೊಪ್ಪದಲ್ಲಿ 1.9 ಎಕರೆ ಜಾಗ ಗುರುತಿಸಲಾಗುವುದು. ಅಪಾರ್ಟ್ವೆುಂಟ್ ನಿರ್ವಣದಿಂದ ಕಡಿಮೆ ಜಾಗದಲ್ಲಿ ಹೆಚ್ಚು ಮನೆ ನಿರ್ಮಾಣ ಸಾಧ್ಯ ಎಂದರು.
ಪ್ರೆಸ್ ಟ್ರಸ್ಟ್ ಮಂಗಳವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಸೂಡಾದಿಂದ ಹೊಸ ಬಡಾವಣೆ ನಿರ್ವಣ, ಪಾರ್ಕ್ಗಳ ಅಭಿವೃದ್ಧಿ ಮಾಡುವ ಗುರಿಯಿದೆ. ಮುಖ್ಯವಾಗಿ ಕೆರೆಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು. ಕುವೆಂಪು ನಗರದ ಕೆರೆ, ನಿಧಿಗೆ, ಆಲ್ಕೊಳ, ವಿಕಾಸ ಶಾಲೆ ಹಿಂಭಾಗ, ನವುಲೆ, ಸೋಮಿನಕೊಪ್ಪ ಕೆರೆ ಸೇರಿ 12 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಕೆರೆ ಒತ್ತುವರಿ ತೆರವುಗೊಳಿಸಿ ಬಡಾವಣೆ ನಿರ್ವಿುಸಲಾಗುವುದು ಎಂದು ಹೇಳಿದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನಾಗರಾಜ್ ನೇರಿಗೆ ಉಪಸ್ಥಿತರಿದ್ದರು.