

ಬೆಂಗಳೂರು: ದೆಹಲಿ ಕರ್ನಾಟಕ ಸಂಘದ ಕಟ್ಟಡಕ್ಕೆ ಲಿಫ್ಟ್ ಅಳವಡಿಕೆ ಹಾಗೂ ವಿವಿಧ ಕಾರ್ಯಚಟುವಟಿಕೆಗಳಿಗೆ ರಾಜ್ಯಸಭಾ ಸಂಸದರ ನಿಧಿಯಿಂದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ, ರಾಜ್ಯಸಭಾ ಸಂಸದೆ ಸುಧಾ ಮೂರ್ತಿ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಜತೆಗೆ ಗ್ರಂಥಾಲಯಕ್ಕಾಗಿ ಇನ್ಫೋಸಿಸ್ ಫೌಂಡೇಶನ್ನಿಂದ 10 ಲಕ್ಷ ರೂ. ನೀಡಿದ್ದಾರೆ.
ಒಟ್ಟು 60 ಲಕ್ಷ ರೂ. ದೇಣಿಗೆ ನೀಡಿರುವ ಸುಧಾ ಮೂರ್ತಿ ಅವರಿಗೆ ದೆಹಲಿ ಕನ್ನಡಿಗರ ಪರವಾಗಿ ಸಂದ ಅಧ್ಯಕ್ಷ ಸಿ.ಎಂ. ನಾಗರಾಜ್ ಧನ್ಯವಾದ ತಿಳಿಸಿದ್ದಾರೆ.