ಪಲಿಮಾರು ಶ್ರೀಗಳಿಂದ ಸುಧಾ ಮಂಗಲೋತ್ಸವ

mutt
Published on

ಉಡುಪಿ: ಕೃಷ್ಣ ಮಠದಲ್ಲಿ ಪಲಿಮಾರು ಮಠದ ಯೋಗದೀಪಿಕಾ ಗುರುಕುಲ ಹಾಗೂ ತತ್ವದೀಪಿಕಾ ಗುರುಕುಲದಲ್ಲಿ 10 ವರ್ಷಗಳಲ್ಲಿ ಅಧ್ಯಯನ ನಡೆಸಿ 2 ವರ್ಷಗಳಲ್ಲಿ ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಂದ ಶ್ರೀಮನ್ನಾ ್ಯಯಸುಧಾ ಅಧ್ಯಯನ ಮಾಡಿದ 16 ವಿದ್ಯಾರ್ಥಿಗಳಿಗೆ ಸುಧಾ ಮಂಗಲೋತ್ಸವ ಭಾನುವಾರ ನಡೆಯಿತು.
ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net