

ಹುಬ್ಬಳ್ಳಿ: ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್- ಎನ್ ಸಿಇ ಆರ್ ಟಿ ನೀಡುವ 2023 -24ನೇ ಸಾಲಿನ "ರಾಷ್ಟ್ರೀಯ ಶೈಕ್ಷಣಿಕ ನಾವಿನ್ಯತಾ ಪುರಸ್ಕಾರಕ್ಕೆ ಇಲ್ಲಿಯ ವಿಶ್ವೇಶ್ವರನಗರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಸುಧಾ ಶೀಲವಂತರ (ಹಾದಿಮನಿ) ಅವರು ಭಾಜನರಾಗಿದ್ದಾರೆ.
ದೇಶದ ಒಟ್ಟು 31 ನಾವಿನ್ಯತಾ ಸಂಶೋಧಕರಿಗೆ ಈ ಗೌರವ ದೊರೆತಿದ್ದು, ಕರ್ನಾಟಕದಿಂದ ಈ ಪ್ರಶಸ್ತಿ ಪಡೆದ ಏಕೈಕ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ದೆಹಲಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.