ಬಸ್ ಚಾಲಕರ ದಿಢೀರ್ ಮುಷ್ಕರ

Protest
Published on

ಸುಳ್ಯ: ವೇತನದಲ್ಲಿ ಕಡಿತ ಹಾಗೂ ವೇತನ ನೀಡುವಲ್ಲಿ ಆಗುವ ವಿಳಂಬ ವಿರೋಧಿಸಿ ಕೆಎಸ್‌ಆರ್‌ಟಿಸಿ ಸುಳ್ಯ ಡಿಪೋದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಚಾಲಕರು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದ ಪರಿಣಾಮ ಗ್ರಾಮೀಣ ಭಾಗಕ್ಕೆ ಸಂಚರಿಸುವ ಜನರು ಪಡುವಂತಾಯಿತು. ಪ್ರತಿಭಟನೆ ಪರಿಣಾಮ ಐದಕ್ಕೂ ಹೆಚ್ಚು ಬಸ್‌ಗಳು ಬಸ್ ನಿಲ್ದಾಣದಲ್ಲೇ ನಿಲ್ಲುವಂತಾಯಿತು.

ಕಾರಣ ಏನು?

ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ‘ಪೂಜಾಯ’ ಎಂಬ ಖಾಸಗಿ ಸಂಸ್ಥೆ ಸಿಬ್ಬಂದಿಗೆ ನೀಡುವ ವೇತನದಲ್ಲಿ ಏಕಾಏಕಿ ಐದು ಸಾವಿರ ರೂ.ಕಡಿತಗೊಳಿಸಿರುವುದು ಮತ್ತು ಕೆಲವರಿಗೆ ವೇತನ ಪಾವತಿಸದೆ ಸತಾಯಿಸುತ್ತಿರುವುದೇ ಈ ಪ್ರತಿಭಟನೆಗೆ ಕಾರಣ ಎಂದು ತಿಳಿದು ಬಂದಿದೆ. ಈ ಚಾಲಕರು ಚಾಲನೆ ಮಾಡುವ ಬಸ್ಸುಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಸಂಚಾರ ನಡೆಸುತ್ತಿದ್ದು, ಅವರ ದಿಢೀರ್ ಪ್ರತಿಭಟನೆಯಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರು ಸಮಸ್ಯೆಗೊಳಗಾದರು.

ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬಂಟ್ವಾಳ, ಧರ್ಮಸ್ಥಳ ಕೊಡಗಿನ ಮಡಿಕೇರಿಯ ಬಸ್ ಸಿಬ್ಬಂದಿ ತಮ್ಮ ತಮ್ಮ ಬಸ್ಸು ನಿಲ್ದಾಣಗಳಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net