ಚನ್ನರಾಯಪಟ್ಟಣದಲ್ಲಿ ತಂಪೆರೆದ ದಿಢೀರ್ ಮಳೆ

ಫೋಟೋ ಶೀರ್ಷಿಕೆ 22ಸಿಆರ್_ಪಿ-3ಎ
ಚನ್ನರಾಯಪಟ್ಟಣದಲ್ಲಿ ಶುಕ್ರವಾರ ದಿಢೀರ್ ಸುರಿದ ಮಳೆ.
Published on

ಚನ್ನರಾಯಪಟ್ಟಣ: ಬಿಸಿಲಿನ ಧಗೆಗೆ ಬಸವಳಿದು ಹೋಗಿದ್ದ ಪಟ್ಟಣದ ಜನತೆಗೆ ಶುಕ್ರವಾರ ಸಂಜೆ ದಿಢೀರ್ ಸುರಿದ ಮಳೆಯಿಂದಾಗಿ ನಾಗರಿಕರು ಕೊಂಚ ನಿಟ್ಟುಸಿರು ಬಿಡವಂತಾಯಿತು.

ಶುಕ್ರವಾರ ಮಧ್ಯಾಹ್ನದ ವೇಳೆ ನಗರದ ಸುತ್ತಮುತ್ತ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆಯಾಗುತ್ತಲೇ 20 ನಿಮಿಷಗಳವರೆಗೆ ಎಡೆಬಿಡದೆ ನಗರ ಸೇರಿದಂತೆ ಸುಮುತ್ತಲಿನ ಗ್ರಾಮಗಳಲ್ಲಿ ಸುರಿದಿದೆ. ದಿಢೀರ್ ಸುರಿದ ಮಳೆಯಿಂದಾಗಿ ಕಾವಾಗಿದ್ದ ವಾತಾವರಣ ಕೊಂಚ ತಂಪಾಗಿದೆ.
ಪಟ್ಟಣ ಮಾತ್ರವಲ್ಲದೆ ತಾಲೂಕಿನ ಕೆಲ ಗ್ರಾಮಗಳಲ್ಲೂ ಕೆಲಹೊತ್ತು ತುಂತುರು ಮಳೆ ಸುರಿದ ಬಗ್ಗೆ ವರದಿಯಾಗಿದೆ. ತಾಲೂಕಿನ ರೈತಾಪಿ ವರ್ಗ ಈ ಅವಧಿಯಲ್ಲಿ ಮಳೆಯ ನಿರೀಕ್ಷೆಯಲ್ಲಿದ್ದು, ಕಳೆದೊಂದು ತಿಂಗಳಿನಿಂದ ಮಳೆ ಬಾರದಿರುವುದರಿಂದ ರಾಗಿ ಹಾಗೂ ಮುಸುಕಿನ ಜೋಳ ಸಂಪೂರ್ಣ ನೆಲಕಚ್ಚಿದ್ದು ತೆಂಗಿನ ತೋಟಗಳು ನೀರಿಲ್ಲದೆ ಬರಡಾಗಿದೆ. ಹೈನುಗಾರಿಕೆಯನ್ನೇ ನಂಬಿರುವ ರೈತರು ಜಾನುವಾರಗಳಿಗೆ ಮೇವು ಒದಗಿಸಲು ಹರಸಾಹಸ ಪಡುತ್ತಿದ್ದಾರೆ.

ಚನ್ನರಾಯಪಟ್ಟಣದಲ್ಲಿ ಶುಕ್ರವಾರ ದಿಢೀರ್ ಸುರಿದ ಮಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net