ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ

28 SDP 1
Published on

ಸಿದ್ದಾಪುರ: ತಾಲೂಕಿನ ಗಾಳೀಜಡ್ಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಪ್ರಯುಕ್ತ ಊರ ನಾಗರಿಕರ ಸಹಕಾರದೊಂದಿಗೆ ಗಾಳೀಜಡ್ಡಿ ಸಹಿಪ್ರಾ ಶಾಲೆಯ ಉಮಾಪತಿ ಹೆಗಡೆ ರಂಗಮಂದಿರದಲ್ಲಿ ಖ್ಯಾತ ಕಲಾವಿದರಿಂದ ಪ್ರದರ್ಶನಗೊಂಡ ಸುದರ್ಶನ ವಿಜಯ ಯಕ್ಷಗಾನ ಬಯಲಾಟ ಮೆಚ್ಚುಗೆ ಗಳಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಸತೀಶ ಹೆಗಡೆ ದಂಟಕಲ್, ಮದ್ದಳೆಯಲ್ಲಿ ಅನಿರುದ್ಧ ಹೆಗಡೆ ವರ್ಗಾಸರ ಹಾಗೂ ಚಂಡೆಯಲ್ಲಿ ಪ್ರಸನ್ನ ಹೆಗ್ಗಾರ ಸಹಕರಿಸಿದರು.
ಮುಮ್ಮೇಳದಲ್ಲಿ ಉದಯ ಹೆಗಡೆ ಕಡಬಾಳ (ಸುದರ್ಶನ), ಕಾರ್ತಿಕ ಚಿಟ್ಟಾಣಿ (ವಿಷ್ಣು), ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ (ಲಕ್ಷ್ಮೀ), ವಿನಯ ಬೇರೊಳ್ಳಿ (ಶತ್ರುಪ್ರಸೂದನ), ಮಹಾಬಲೇಶ್ವರ ಗೌಡ( ದೇವೇಂದ್ರ) ಪಾತ್ರ ನಿರ್ವಹಿಸಿದರು.
ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಮಹಾಬಲೇಶ್ವರ ಎನ್.ಭಟ್ಟ ಗಾಳೀಮನೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net