17 ರಿಂದ ಸುದರ್ಶನ ಕ್ರಿಯಾ ಶಿಬಿರ

Siddheshwar organization expresses anger against Mushrif
Shivasharane Hemaraddi Mallamma Jayanti
Published on

ವಿಜಯಪುರ: ನಗರದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ಆರ್ಟ್​ ಆಫ್​ ಲಿವಿಂಗ್​ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಮಿತಿ ಸಂಯುಕ್ತಾಶ್ರಯದಲ್ಲಿ ಮಾ.17 ರಿಂದ ಮಾ. 23 ರ ವರೆಗೆ ಸಂತಸದ ಕಾರ್ಯಕ್ರಮ ಹಾಗೂ ಸುದರ್ಶನ ಕ್ರಿಯಾ ಶಿಬಿರ ನಡೆಯಲಿದೆ.

ಆರ್ಟ್​ ಆಫ್​ ಲಿವಿಂಗ್​ನ ಅನುಭವಿ ಶಿಕ ಡಾ. ಬಿ.ಎಂ. ಪಾಟೀಲ ಗುರೂಜಿ ನೇತೃತ್ವದಲ್ಲಿ ಶಿಬಿರ ನಡೆಯಲಿದ್ದು, ಯೋಗ, ಧ್ಯಾನ, ಪ್ರಾಣಾಯಾಮ, ಆರೋಗ್ಯ, ಒತ್ತಡರಹಿತ ಜೀವನ, ಮಾನಸಿಕ ಸದೃಢತೆ ಹಾಗೂ ಜೀವನ ಕಲೆ ಸೂತ್ರಗಳನ್ನು ತಿಳಿಸಲಾಗುವುದು.

ನಿತ್ಯವೂ ಬೆಳಗ್ಗೆ 5.30 ರಿಂದ 8ರ ವರೆಗೆ ಹಾಗೂ ಸಂಜೆ 6 ರಿಂದ 8.30ರ ವರೆಗೆ ಎರಡು ಪ್ರತ್ಯೇಕ ಬ್ಯಾಚ್​ಗಳಲ್ಲಿ ಶಿಬಿರಗಳು ನಡೆಯಲಿವೆ. ಆಸಕ್ತರು ಮಾಹಿತಿಗೆ ಮೊ. 8050280580 ಮತ್ತು 9611297090ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net