ಕೆರೂರದಲ್ಲಿ ಸುದರ್ಶನ ಹೋಮ

Sudarshan Homa at Kerura
ಕೆರೂರ ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಸುದರ್ಶನ ಹೋಮ ಮಾಡಲಾಯಿತು. ರುದ್ರಮುನಿ ಶ್ರೀಗಳು, ಸಂಕಣ್ಣ ಹೊಸಮನಿ, ಲಕ್ಷ್ಮಣ ಮುಗಳಿ ಇತರರಿದ್ದರು.
Published on

ಕೆರೂರ: ಪಟ್ಟಣದ ಬನಶಂಕರಿದೇವಿ ದೇವಸ್ಥಾನದಲ್ಲಿ ಅಧಿಕ ಮಾಸದ ನಿಮಿತ್ತ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಆರಂಭವಾದ ಸುದರ್ಶನ ಹೋಮ ನಿರಂತರ 3 ತಾಸು ನಡೆಯಿತು.

ಬನಶಂಕರಿದೇವಿಗೆ ಬೆಳಗ್ಗೆ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು.

ಅರ್ಚಕ ರುದ್ರಮುನಿ ಶ್ರೀಗಳು ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ಅಧಿಕ ಮಾಸದಲ್ಲಿ ಪುರುಷೋತ್ತಮ ಮಾಸವೆಂದು ವಿಶೇಷವಾಗಿ ವಿಷ್ಣುವಿನ ಆರಾಧನೆ ಮಾಡಲಾಗುವುದು.

ಈ ಮಾಸದಲ್ಲಿ ಮಾಡಿದ ಪೂಜೆ, ಹೋಮ, ಹವನಗಳಿಗೆ ಅತ್ಯಧಿಕ ಲವಿದೆ ಎಂದು ಹೇಳಿದರು.

ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ, ಲಕ್ಷ್ಮಣ ಮುಗಳಿ, ಶಿವಪ್ಪ ಹೆಬ್ಬಳ್ಳಿ, ಗುಂಡಣ್ಣ ಬೋರಣ್ಣವರ, ಉಮೇಶ ಗೌಡ, ಶ್ರೀಧರ ಬೋರಣ್ಣವರ, ವಿಜಯ ಪರದೇಶಿ, ತುಳಸಿದಾಸ ಬೋರಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net