ಸೂಡ ಕ್ರಾಸ್ ರಸ್ತೆ ‘ಕೆಸರುಗದ್ದೆ’

blm (2)
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ ಪೈಪ್‌ಲೈನ್ ಕಾಮಗಾರಿಗಾಗಿ ಅಗೆದ ರಸ್ತೆಯನ್ನು ಹಾಗೇ ಬಿಟ್ಟ ಪರಿಣಾಮ ಮಳೆಗೆ ರಸ್ತೆ ಕೆಸರುಗದ್ದೆಯಂತಾಗಿದ್ದು, ವಾಹನ ಸವಾರರು ಈ ಮಾರ್ಗದಲ್ಲಿ ಸಂಚರಿಸುವಾಗ ನಿತ್ಯ ಸರ್ಕಸ್ ಮಾಡುತ್ತ, ಹರಸಾಹಸ ಪಡುವುದನ್ನು ಪಿಲಾರುಖಾನ ಪರಿಸರದಲ್ಲಿ ಕಾಣಬಹುದು. ಪಿಲಾರುಖಾನ ಪ್ರದೇಶದಿಂದ ಸೂಡ, ಪಳ್ಳಿ ಗ್ರಾಮಗಳಿಗೆ ಸಂಪರ್ಕ ಸಾಧಿಸುವ ಸೂಡ ಕ್ರಾಸ್ ರಸ್ತೆಯ ಬದಿಯಲ್ಲಿ ಪೈಪ್‌ಲೈನ್ ಹಾಗೂ ಕೇಬಲ್ ಅಳವಡಿಕೆಗಾಗಿ ರಸ್ತೆ ಅಗೆದು ಅದೆಷ್ಟೋ ತಿಂಗಳು ಕಳೆದಿದೆ. ಆದರೆ ಇನ್ನೂ ಸರಿಪಡಿಸಲು ಅಧಿಕಾರಿಗಳು ಮುಂದಾಗಿಲ್ಲ. ಈ ವಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಅಗೆದ ಮಣ್ಣು ಹಾಗೇ ಇದೆ: ಕಾಮಗಾರಿ ಮುಗಿದ ನಂತರ, ರಸ್ತೆಯನ್ನು ಸರಿಯಾಗಿ ದುರಸ್ತಿ ವಾಡದೆ, ಅಗೆದ ಮಣ್ಣನ್ನು ಹಾಗೆಯೇ ಬಿಡಲಾಗಿದೆ. ಪರಿಣಾಮವಾಗಿ, ಸಣ್ಣ ಮಳೆ ಬಂದರೂ ರಸ್ತೆ ಕೆಸರುಮಯವಾಗಿ, ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿವೆ. ಈ ರಸ್ತೆ ಸೂಡ ಕ್ರಾಸ್ ಮತ್ತು ಪಳ್ಳಿ ನಡುವೆ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ನಿತ್ಯ ನೂರಾರು ವಾಹನಗಳು ಮತ್ತು ಜನರು ಸಂಚರಿಸುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಮತ್ತು ಸ್ಥಳೀಯ ಆಡಳಿತದ ಗಮನ ಸೆಳೆದಿದ್ದರೂ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೈಪ್‌ಲೈನ್ ಅಳವಡಿಸುವುದು ಅಗತ್ಯವಿತ್ತು. ಆದರೆ ಕಾಮಗಾರಿ ಮುಗಿದ ನಂತರ ರಸ್ತೆಯನ್ನು ಏಕೆ ಸರಿಪಡಿಸಿಲ್ಲ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಅಪಘಾತಕ್ಕೆ ಕಾರಣ

ಶಿರ್ವ ಹಾಗೂ ಬೆಳ್ಮಣ್ ಭಾಗದಿಂದ ಬರುವ ವಾಹನಗಳು ಸೂಡ ಕ್ರಾಸ್ ಬಳಿ ಬರುತ್ತಿದ್ದಂತೆ ರಸ್ತೆಯ ಹೊಂಡದಿಂದ ಎಡವಟ್ಟು ವಾಡಿಕೊಂಡು ಕೆಲವೊಂದು ಭಾರಿ ಅಪಘಾತಕ್ಕೂ ಕಾರಣವಾಗುತ್ತಿದೆ. ಈಗಾಗಲೇ ದ್ವಿಚಕ್ರ ವಾಹನ ಸವಾರು ಬಿದ್ದು ಗಾಯಗೊಂಡ ಟನೆಯೂ ಸಾಕಷ್ಟು ನಡೆದಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆಯನ್ನು ಪರಿಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮಕ್ಕಳು ಶಾಲೆಗೆ ಹೋಗಲು ಈ ರಸ್ತೆಯಲ್ಲೇ ಸಾಗಬೇಕು. ಪ್ರತಿ ದಿನವೂ ಅವರು ಕೆಸರಿನಲ್ಲಿ ನಡೆದುಕೊಂಡು ಹೋಗಬೇಕಾಗಿದೆ. ಕೆಲವೊಮ್ಮೆ ಜಾರಿಬಿದ್ದು ಗಾಯ ವಾಡಿಕೊಂಡ ಟನೆಗಳೂ ನಡೆದಿವೆ. ರಸ್ತೆಯ ಪಕ್ಕದಲ್ಲೇ ಹೊಂಡ ತೋಡಿದ್ದು ಮಕ್ಕಳು ನಿತ್ಯ ಓಡಾಡುವುದರಿಂದ ಅಪಾಯಕಾರಿಯಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕಿದೆ. ಸುಮಿತ್ರಾ, ಗ್ರಾಮಸ್ಥರು. ರಸ್ತೆ ದುರಸ್ತಿ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಬೇಕು. ರಸ್ತೆ ಅಗೆದು ಹಾಕಿ ಹಲವು ತಿಂಗಳು ಕಳೆದರೂ ಇಲ್ಲಿವರೆಗೂ ಸರಿಪಡಿಸಿಲ್ಲ. ಗ್ರಾಮಸ್ಥರು ಹಾಗೂ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಸತೀಶ್ ಕುವಾರ್, ಸ್ಥಳೀಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net