ಹೊಸ ಕಾವೇರಿಯಲ್ಲಿ ನೇಣುಬಿಗಿದು ಆತ್ಮಹತ್ಯೆ

suicide
Published on

ಕಿನ್ನಿಗೋಳಿ: ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ ಕೋಡಿ ಸಮೀಪದ ಹೊಸ ಕಾವೇರಿಯಲ್ಲಿ ವೃದ್ಧರೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊಸ ಕಾವೇರಿ ನಿವಾಸಿ ಭಾಸ್ಕರ(62) ಆತ್ಮಹತ್ಯೆ ಮಾಡಿಕೊಂಡವರು. ಭಾಸ್ಕರ ಅವರು ಬೈಕಂಪಾಡಿಯಲ್ಲಿ ಉದ್ಯೋಗದಲ್ಲಿದ್ದು, ನಿವೃತ್ತರಾಗಿ ಮನೆಯಲ್ಲಿ ವಾಸವಿದ್ದರು. ಹೊಸ ಮನೆ ಕಟ್ಟಲು ಅಸಾಧ್ಯವಾದ ಕಾರಣ ಮಾನಸಿಕವಾಗಿ ನೊಂದಿದ್ದು, ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಮನೆಯ ಚಾವಡಿಯಲ್ಲಿ ನೈಲಾನ್ ಹಗ್ಗವನ್ನು ಪಕ್ಕಾಸಿಗೆ ಹಾಕಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net