

ಧಾರವಾಡ: ನಗರದ ಸಿಬಿಟಿ ಬಳಿಯ ಸಿಟಿ ಕ್ಲಿನಿಕ್‌ನಲ್ಲಿ ಹುಬ್ಬಳ್ಳಿಯ ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯಿಂದ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ ಆರಂಭಿಸಲಾಗಿದೆ ಎಂದು ಡಾ. ಶಿವಪ್ರಸಾದ್ ಮಠದ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯೂರೋ ಸರ್ಜನ್ ಡಾ. ರಾಜು ಕದಂ, ಮೆಡಿಕಲ್ ಗ್ಯಾಸ್ಟೊçÃಎಂಟರಾಲಜಿಸ್ಟ್ ಡಾ. ಸಂದೀಪ ಕುಂಬಾರ ಹಾಗೂ ಶ್ವಾಸಕೋಶ ತಜ್ಞ ಡಾ. ಗೋವಿಂದ ದೇಸಾಯಿ, ಇತರರು ಪ್ರತಿ ತಿಂಗಳ 1 ಮತ್ತು 3ನೇ ಶನಿವಾರ ಮಧ್ಯಾಹ್ನ 2ರಿಂದ 4ರವರೆಗೆ ಸಿಟಿ ಕ್ಲಿನಿಕ್‌ನಲ್ಲಿ ಲಭ್ಯ ಇರಲಿದ್ದಾರೆ. ಇಲ್ಲಿ ಅಗತ್ಯ ಇದ್ದವರಿಗೆ ಚಿಕಿತ್ಸೆ ನೀಡಿ ಉಳಿದ ದಿನಗಳಲ್ಲಿ ಟೆಲಿಮೆಡಿಸಿನ್ ಮೂಲಕ ಆರೋಗ್ಯ ಸೇವೆ ಒದಗಿಸಲಾಗುವುದು ಎಂದರು.
ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯ ಮೆಡಿಕಲ್ ಗ್ಯಾಸ್ಟೊçÃಎಂಟರಾಲಜಿಸ್ಟ್ ಡಾ. ಸಂದೀಪ ಕುಂಬಾರ ಮಾತನಾಡಿ, ಒತ್ತಡ, ಕಡಿಮೆ ನಿದ್ರೆ, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು ಮತ್ತು ಮದ್ಯಪಾನ ಅಸಿಡಿಟಿಗೆ ಕಾರಣ. ಇದರಿಂದ ಕರುಳಿನ ಬಾವು, ಕಾಮಾಲೆ, ಇತರ ರೋಗಗಳು ಬರುತ್ತವೆ. ಉತ್ತಮ ಆಹಾರ ಕ್ರಮ ಪಾಲನೆ ಮತ್ತು ನಿತ್ಯ ವ್ಯಾಯಾಮದಿಂದ ಅಸಿಡಿಟಿ ನಿಯಂತ್ರಣ ಸಾಧ್ಯ. ಸಿಟಿ ಕ್ಲಿನಿಕ್‌ನಲ್ಲಿ ತಿಂಗಳಿಗೆ 2 ದಿನ ಚಿಕಿತ್ಸೆಗೆ ಲಭ್ಯ ಇರಲಿದ್ದೇನೆ ಎಂದರು.
ಡಾ. ರಾಜು ಕದಂ, ಗೌಸ್ ತೊರಗಲ್, ಡ್ಯಾನಿಯಲ್, ಎಸ್.ಎಸ್. ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.